ಭಾನುವಾರ, ಅಕ್ಟೋಬರ್ 20, 2019
27 °C
ವಿಶ್ವ ಟೆನಿಸ್‌ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ 42ನೇ ಸ್ಥಾನ

ಎಟಿಪಿ ಟೆನಿಸ್‌ ಡಬಲ್ಸ್: ದಿವಿಜ್‌ ಏಷ್ಯಾದ ನಂ.1 ಆಟಗಾರ

Published:
Updated:
Prajavani

ನವದೆಹಲಿ: ಭಾರತದ ದಿವಿಜ್‌ ಶರಣ್‌ ಎಟಿಪಿ ಟೆನಿಸ್‌ ಡಬಲ್ಸ್ ‌ರ‍್ಯಾಂಕಿಂಗ್‌ನಲ್ಲಿ ಈಗ ಏಷ್ಯಾದ ನಂ.1 ಆಟಗಾರ. ಇತ್ತೀಚೆಗೆ  ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರು ಸ್ಥಾನ ಏರಿಕೆ ಕಂಡಿರುವ ಅವರು 42ನೇ ಸ್ಥಾನದಲ್ಲಿದ್ದಾರೆ.

ದಿವಿಜ್‌ ಅವರಿಗಿಂತ ಮೇಲಿನ ರ‍್ಯಾಂಕಿನಲ್ಲಿರುವ ಬಹುತೇಕ ಆಟಗಾರರು ಯೂರೋಪ್‌, ಅಮೆರಿಕ ಭಾಗದವರು. ಕೆಲವರು ದಕ್ಷಿಣ ಅಮೆರಿಕದ ದೇಶಗಳಾದ ಬ್ರೆಜಿಲ್‌ ಹಾಗೂ ಅರ್ಜೆಂಟೀನಾದವರು.

‘ಈ ಮೈಲುಗಲ್ಲು ತಲುಪಿರುವುದಕ್ಕೆ ಸಂತಸವಾಗುತ್ತಿದೆ. ಜೀವನದುದ್ದಕ್ಕೂ ಈ ನೆನಪು ನನ್ನ ಜೊತೆಯಲ್ಲಿರುತ್ತದೆ’ ಎಂದು ದಿವಿಜ್‌ ಪಿಟಿಐಗೆ ತಿಳಿಸಿದರು.

ಟೋಕಿಯೊ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿರುವ ದೆಹಲಿಯ ಈ ಎಡಗೈ ಆಟಗಾರ, ರೋಹನ್‌ ಬೋಪಣ್ಣ ಜೊತೆಯಾಗಿ ಟಾಟಾ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಹಲವು ಕಳಪೆ ಫಲಿತಾಂಶಗಳ ಹಿನ್ನೆಲೆಯಲ್ಲಿ ಈ ಜೋಡಿ ಬೇರ್ಪಟ್ಟಿತು.

ದಿವಿಜ್‌ ಜೊತೆಗಾರರನ್ನು ಬದಲಾಯಿಸುತ್ತಲೇ ಸಾಗಿದರು. ಈ ವರ್ಷ 28 ಟೂರ್ನಿಗಳನ್ನು 10 ಬೇರೆ ಬೇರೆ ಜೊತೆಗಾರರ ಅವರು ಆಡಿದ್ದಾರೆ.

ದಿವಿಜ್‌ ಮತ್ತು 44ನೇ ರ‍್ಯಾಂಕಿನ ಬೋಪಣ್ಣ ಸರ್ಕಾರದ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯ (ಟಾಪ್ಸ್) ಫಲಾನುಭವಿಗಳು.

Post Comments (+)