ಬುಧವಾರ, ಜನವರಿ 19, 2022
26 °C

ಡೇವಿಸ್‌ ಕಪ್‌: ಡೆನಾರ್ಕ್ ತಂಡಕ್ಕೆ ಭಾರತದ ಆತಿಥ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತವು ಮುಂದಿನ ವರ್ಷದ ಮಾರ್ಚ್‌ನಲ್ಲಿ ಡೆನ್ಮಾರ್ಕ್‌ ಎದುರಿನ ಡೇವಿಸ್‌ ಕಪ್‌ ವಿಶ್ವಗುಂಪು ಒಂದರ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. 2019ರ ಫೆಬ್ರುವರಿ ಬಳಿಕ ದೇಶವು ಮೊದಲ ಬಾರಿ ಡೇವಿಸ್‌ ಕಪ್ ಪಂದ್ಯ ಆಯೋಜಿಸಲಿದೆ.

ಡೆನ್ಮಾರ್ಕ್ ಎದುರಿನ ಪಂದ್ಯವು 2022ರ ಮಾರ್ಚ್‌ 4 ಹಾಗೂ 5ರಂದು ನಡೆಯಲಿದೆ.

ಭಾರತವು ಕಳೆದ ಮೂರು ಪಂದ್ಯಗಳನ್ನು ಆಡಲು ಫಿನ್ಲೆಂಡ್‌ (2021), ಕ್ರೊವೇಷ್ಯಾ (2020) ಮತ್ತು ಕಜಕಸ್ತಾನಕ್ಕೆ (2019, ಪಾಕಿಸ್ತಾನ ಎದುರಿನ ಪಂದ್ಯ) ತೆರಳಿತ್ತು.

2019ರ ಫೆಬ್ರುವರಿಯಲ್ಲಿ ಇಟಲಿ ತಂಡಕ್ಕೆ ಆತಿಥ್ಯ ವಹಿಸಿದ್ದ ಭಾರತ 1–3ರಿಂದ ಸೋತಿತ್ತು. ಕೋಲ್ಕತ್ತದಲ್ಲಿ ಈ ಹಣಾಹಣಿ ನಡೆದಿತ್ತು.

ಭಾರತದ ಎಲ್ಲ ಆಟಗಾರರಿಗಿಂತ ಹೆಚ್ಚಿನ ರ‍್ಯಾಂಕಿಂಗ್‌ ಹೊಂದಿರುವ ಸಿಂಗಲ್ಸ್ ವಿಭಾಗದ ಆಟಗಾರ ಹೋಲ್ಗರ್ ರೂನ್ (103)  ಡೆನ್ಮಾರ್ಕ್ ತಂಡದಲ್ಲಿದ್ದಾರೆ. ಭಾರತದ ಪ್ರಜ್ಞೇಶ್ ಗುಣೇಶ್ವರನ್‌ 215ನೇ ರ‍್ಯಾಂಕಿಂಗ್‌ನಲ್ಲಿದ್ದು, ಸುಮಿತ್ ನಗಾಲ್‌ 218ನೇ ಸ್ಥಾನದಲ್ಲಿದ್ದಾರೆ.

1984ರ ಸೆಪ್ಟೆಂಬರ್ ನಂತರ ಭಾರತವು ಆರ್ಹಸ್‌ನಲ್ಲಿ 3-2ರಿಂದ ಗೆದ್ದ ನಂತರ ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ಮೊದಲ ಪಂದ್ಯ ಇದಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು