ಸೋಮವಾರ, ನವೆಂಬರ್ 18, 2019
25 °C

ಫೆಡರರ್‌ ‘1,500’

Published:
Updated:
Prajavani

ಬಾಸೆಲ್‌: ಸ್ವಿಟ್ಜರ್ಲೆಂಡ್‌ನ ಟೆನಿಸ್‌ ತಾರೆ ರೋಜರ್‌ ಫೆಡರರ್‌ ಅವರು ಸೋಮವಾರ ಹೊಸ ಮೈಲುಗಲ್ಲು ಸ್ಥಾಪಿಸಿದರು.

ಬಾಸೆಲ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಕಣಕ್ಕಿಳಿಯುವ ಮೂಲಕ ವೃತ್ತಿಬದುಕಿನಲ್ಲಿ 1,500 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದರು.

ಈ ಹಣಾಹಣಿಯಲ್ಲಿ 38 ವರ್ಷ ವಯಸ್ಸಿನ ಫೆಡರರ್‌ 6–2, 6–1ರಲ್ಲಿ ಜರ್ಮನಿಯ ಪೀಟರ್‌ ಗೊಜೊವ್‌ಜಿಕ್‌ ಅವರನ್ನು ಮಣಿಸಿದರು.

ಪ್ರತಿಕ್ರಿಯಿಸಿ (+)