ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಿತಾಗೆ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ ಪಟ್ಟ

ದೆಹಲಿ ಲಾನ್ ಟೆನಿಸ್ ಸಂಸ್ಥೆಯಲ್ಲಿ ನಡೆದ ಟೂರ್ನಿ: ದಕ್ಸ್‌ಗೆ ಬಾಲಕರ ವಿಭಾಗದ ಪ್ರಶಸ್ತಿ
Last Updated 10 ಅಕ್ಟೋಬರ್ 2021, 15:32 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಸುಹಿತಾ ಮಾರುತಿ ಅವರು ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ 16 ವರ್ಷದೊಳಗಿನ ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬಾಲಕರ ವಿಭಾಗದಲ್ಲಿ ಮಧ್ಯಪ್ರದೇಶದ ದಕ್ಷ್ ಪ್ರಸಾದ್ ಚಾಂಪಿಯನ್ ಆದರು.

ದೆಹಲಿ ಲಾನ್ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಸುಹಿತಾ6-3, 2-6, 6-4ರಲ್ಲಿ ಮಹಾರಾಷ್ಟ್ರದ ಸೋನಲ್ ಪಾಟೀಲ್ ಎದುರು ಜಯ ಗಳಿಸಿದರು. ಟೂರ್ನಿಯಲ್ಲಿ ಸುಹಿತಾಗೆ ಎರಡನೇ ಶ್ರೇಯಾಂಕ ನೀಡಿದ್ದರೆ ಸೋನಲ್‌ 12ನೇ ಶ್ರೇಯಾಂಕ ಹೊಂದಿದ್ದರು.

ಫೈನಲ್‌ನಲ್ಲಿ ಉತ್ತರಪ್ರದೇಶದ ರುಶಿಲ್ ಖೋಸ್ಲಾ ಅವರನ್ನು 6-3, 6-2ರಲ್ಲಿ ಮಣಿಸಿ ದಕ್ಷ್ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡರು. ಇವರಿಬ್ಬರೂ ಚಂಡೀಗಢದ ರೌಂಡ್‌ಗ್ಲಾಸ್ ಟೆನಿಸ್ ಅಕಾಡೆಮಿಯಲ್ಲಿ ಆದಿತ್ಯ ಸಚ್‌ದೇವ ಬಳಿ ತರಬೇತಿ ಪಡೆಯುತ್ತಿರುವ ಆಟಗಾರರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT