ಶನಿವಾರ, ಏಪ್ರಿಲ್ 4, 2020
19 °C
ಮಹಾರಾಷ್ಟ್ರ ಓಪನ್‌ ಟೆನಿಸ್‌ ಟೂರ್ನಿ

ರೋಹನ್‌ ಬೋಪಣ್ಣ-ಅರ್ಜುನ್‌ಗೆ ವೈಲ್ಡ್‌ಕಾರ್ಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಭಾರತದ ರೋಹನ್‌ ಬೋಪಣ್ಣ ಹಾಗೂ ಅರ್ಜುನ್‌ ಖಾಡೆ ಜೋಡಿಗೆ ಮಹಾರಾಷ್ಟ್ರ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ವೈಲ್ಡ್‌ಕಾರ್ಡ್‌ ಪ್ರವೇಶ ಲಭಿಸಿದೆ. ಮೂರನೇ ಆವೃತ್ತಿಯ ಟೂರ್ನಿಯು ಫೆಬ್ರುವರಿ 3ರಿಂದ 9ರವರೆಗೆ ನಡೆಯಲಿದೆ.

ವಿಶ್ವ ಡಬಲ್ಸ್ ಕ್ರಮಾಂಕದಲ್ಲಿ 38ನೇ ಸ್ಥಾನದಲ್ಲಿರುವ ಬೋಪಣ್ಣ, ಹೋದ ಆವೃತ್ತಿಯ ಡಬಲ್ಸ್ ವಿಭಾಗದಲ್ಲಿ ದಿವಿಜ್‌ ಶರಣ್‌ ಜೊತೆಗೂಡಿ ಚಾಂಪಿಯನ್‌ ಪಟ್ಟ ಧರಿಸಿದ್ದರು. ದಕ್ಷಿಣ ಏಷ್ಯಾದ ಏಕೈಕ ಎಟಿಪಿ ಟೂರ್‌ ಟೂರ್ನಿ ಎನಿಸಿಕೊಂಡಿರುವ ಮಹಾರಾಷ್ಟ್ರ ಓಪನ್‌ನಲ್ಲಿ ಈ ಬಾರಿ ಅವರು ಸ್ಥಳೀಯ ಆಟಗಾರ ಅರ್ಜುನ್‌ ಖಾಡೆ ಜೊತೆಯಾಗಿ ಆಡಲಿದ್ದಾರೆ.

ದಿವಿಜ್‌, ಈಗಾಗಲೇ ಟೂರ್ನಿಯ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದು, ರಷ್ಯಾ ಆಟಗಾರ ಅರ್ಟೆಮ್‌ ಸಿತಾಕ್‌ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. ಅರ್ಜುನ್‌ ಖಾಡೆ ಅವರಿಗೆ ಸಿಂಗಲ್ಸ್‌ ವಿಭಾಗದಲ್ಲೂ ವೈಲ್ಡ್‌ಕಾರ್ಡ್‌ ಪ್ರವೇಶ ಸಿಕ್ಕಿದೆ.  ಶಶಿಕುಮಾರ್ ಮುಕುಂದ್‌, ವೈಲ್ಡ್‌ಕಾರ್ಡ್‌ ಪಡೆದ ಭಾರತದ ಇನ್ನೋರ್ವ ಆಟಗಾರ.

ಖಾಡೆ ಹಾಗೂ ಮುಕುಂದ್‌ ಸೇರಿದಂತೆ ಭಾರತದ ಐವರು ಆಟಗಾರರು ಸಿಂಗಲ್ಸ್‌ ವಿಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು 28 ಆಟಗಾರರನ್ನು ಒಳಗೊಂಡ ಡ್ರಾ ಇದಾಗಿದೆ.

ಶನಿವಾರ ಹಾಗೂ ಭಾನುವಾರ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು