ಬುಧವಾರ, ಅಕ್ಟೋಬರ್ 23, 2019
21 °C

ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌: ನಿನಾದ್‌ ಜೋಡಿ ರನ್ನರ್‌ ಅಪ್‌

Published:
Updated:
Prajavani

ಬೆಂಗಳೂರು: ಕರ್ನಾಟಕದ ನಿನಾದ್‌ ರವಿ ಹಾಗೂ ಮಹಾರಾಷ್ಟ್ರದ ಇಂದ್ರ ಜೀತ್‌ ಬೋರಡೆ ಜೋಡಿಯು ಹರಿ ಯಾಣದ ಕಾರ್ನಲ್‌ನಲ್ಲಿ ನಡೆದ ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌ನ ಬಾಲಕರ (18 ವರ್ಷದೊಳಗಿನವರು)ಡಬಲ್ಸ್ ವಿಭಾಗದಲ್ಲಿ ರನ್ನರ್‌ ಅಪ್‌ ಆಯಿತು.

ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಹರಿಯಾಣದ ಕೇಶ ರಥ್‌ ಹಾಗೂ ಬಿ.ಸಿದ್ದಾರ್ಥ್‌ ಜೋಡಿಗೆ 6–3, 2–6, 9–11ರಿಂದ ನಿನಾದ್‌ ಜೋಡಿ ಮಣಿಯಿತು.

ಮೊದಲ ಸೆಟ್‌ನಲ್ಲಿ ಗಳಿಸಿದ ಮುನ್ನಡೆಯನ್ನು ಕಾಯ್ದುಕೊಳ್ಳಲು ವಿಫಲವಾಯಿತು.

ಇದಕ್ಕೂ ಮುನ್ನ ನಡೆದ ಸಿಂಗಲ್ಸ್ ಸೆಮಿಫೈನಲ್‌ ಹಣಾಹಣಿಯಲ್ಲಿ ನಿನಾದ್‌ ಅವರು ಹರಿಯಾಣದ ಡಿ.ವಿವೇಕ್‌ ಕುಮಾರ್‌ ಎದುರು 6–4, 2–6, 3–6ರಿಂದ ನಿರಾಸೆ ಕಂಡರು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)