ಬುಧವಾರ, ಮಾರ್ಚ್ 3, 2021
31 °C

ಟೆನಿಸ್‌: ಜೆಂಗ್‌ಗೆ ಚೊಚ್ಚಲ ಡಬ್ಲ್ಯುಟಿಎ ಗರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಸ್‌ ಏಂಜಲೀಸ್‌: ಅಮೋಘ ಆಟ ಆಡಿದ ಚೀನಾದ ಜೆಂಗ್‌ ಸಯಿಸೈ ಅವರು ಸಿಲಿಕಾನ್‌ ವಾಲಿ ಕ್ಲಾಸಿಕ್‌ ಟೆನಿಸ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ವೃತ್ತಿಬದುಕಿನಲ್ಲಿ ಗೆದ್ದ ಚೊಚ್ಚಲ ಡಬ್ಲ್ಯುಟಿಎ ಪ್ರಶಸ್ತಿ ಇದಾಗಿದೆ.

ಭಾನುವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಜೆಂಗ್‌ 6–3, 7–6 ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಆಟಗಾರ್ತಿ ಆರ್ಯನ ಸಬಲೆಂಕಾ ಅವರಿಗೆ ಆಘಾತ ನೀಡಿದರು.

ಮೊದಲ ಸೆಟ್‌ನಲ್ಲಿ ಜೆಂಗ್‌, ಸುಲಭವಾಗಿ ಎದುರಾಳಿಯ ಸವಾಲು ಮೀರಿದರು. ಆದರೆ ಎರಡನೇ ಸೆಟ್‌ನಲ್ಲಿ ಬೆಲಾರಸ್‌ನ ಸಬಲೆಂಕಾ ದಿಟ್ಟ ಆಟ ಆಡಿದರು. ಹೀಗಾಗಿ ಜಿದ್ದಾಜಿದ್ದಿನ ‍ಪೈಪೋಟಿ ಏರ್ಪಟ್ಟಿತು. ‘ಟೈ ಬ್ರೇಕರ್‌’ನಲ್ಲಿ ಡಬಲ್‌ ಫಾಲ್ಟ್‌ ಮಾಡಿದ ಸಬಲೆಂಕಾ ಕೈ ಸುಟ್ಟುಕೊಂಡರು.

ಈ ಸೆಟ್‌ನಲ್ಲಿ ಬೆಲಾರಸ್‌ನ ಆಟಗಾರ್ತಿ ಎಂಟು ಬಾರಿ ಡಬಲ್‌ ಫಾಲ್ಟ್‌ ಮಾಡಿದರು. 25 ವರ್ಷ ವಯಸ್ಸಿನ ಜೆಂಗ್‌ ಐದು ಬಾರಿ ಈ ತಪ್ಪು ಎಸಗಿದರು. ಫೈನಲ್‌ ಹೋರಾಟ 45 ನಿಮಿಷ ನಡೆಯಿತು.

ಪ್ರಶಸ್ತಿಯ ಹಾದಿಯಲ್ಲಿ ಜೆಂಗ್‌ ಅವರು ಡೇನಿಯೆಲ್‌ ಕಾಲಿನ್ಸ್‌, ಅಮಂಡಾ ಅನಿಸಿಮೋವಾ ಮತ್ತು ಮರಿಯಾ ಸಕ್ಕಾರಿ ಅವರನ್ನು ಸೋಲಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.