ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್: 9ನೇ ಸ್ಥಾನಕ್ಕೆ ಒಸಾಕಾ

Last Updated 31 ಆಗಸ್ಟ್ 2020, 14:07 IST
ಅಕ್ಷರ ಗಾತ್ರ

ಪ್ಯಾರಿಸ್‌: ಜಪಾನ್‌ ಆಟಗಾರ್ತಿ ನವೊಮಿ ಒಸಾಕಾ ಅವರು ಸೋಮವಾರ ಪ್ರಕಟವಾಗಿರುವ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನಕ್ಕೆ ಏರಿದ್ದಾರೆ. ವಾರಾಂತ್ಯದಲ್ಲಿ ಅವರು ವೆಸ್ಟರ್ನ್‌ ಆ್ಯಂಡ್‌ ಸದರ್ನ್‌ ಓಪನ್ ಟೆನಿಸ್‌‌ ಟೂರ್ನಿಯ ಫೈನಲ್‌ ಪಂದ್ಯದಿಂದ ಹಿಂದೆ ಸರಿದಿದ್ದರು.

ಗಾಯದ ಹಿನ್ನೆಲೆಯಲ್ಲಿ ಅವರುಟೂರ್ನಿಯ ಫೈನಲ್‌ನಲ್ಲಿ ಆಡಿರಲಿಲ್ಲ. ಇದರಿಂದ ಟೂರ್ನಿಯ ಫೈನಲ್‌ಗೆ ಕಾಲಿಟ್ಟಿದ್ದ ವಿಕ್ಟೊರಿಯಾ ಅಜರೆಂಕಾ ಅವರಿಗೆ ಪ್ರಶಸ್ತಿ ನೀಡಲಾಗಿತ್ತು. ಒಸಾಕಾ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಮಿಸಾಕಿ ಡೊಯ್‌ ಎದುರು ಸೆಣಸಲಿದ್ದಾರೆ.

ಅಜರೆಂಕಾ ಅವರ ರ‍್ಯಾಂಕಿಂಗ್‌ನಲ್ಲೂ ಏರಿಕೆಯಾಗಿದ್ದು, 32ನೇ ಸ್ಥಾನದಿಂದ 27ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಮೊದಲ ಸ್ಥಾನದಲ್ಲಿದ್ದಾರೆ. ಸಿಮೊನಾ ಹಲೆಪ್‌ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇವರಿಬ್ಬರೂ ಅಮೆರಿಕ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT