ಮೆಲ್ಬರ್ನ್ (ರಾಯಿಟರ್ಸ್/ಎಎಫ್ಪಿ/ ಪಿಟಿಐ): ಅಮೆರಿಕದ ಸೆರೆನಾ ವಿಲಿ ಯಮ್ಸ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಋತುವಿನ ಮೊದಲ ಗ್ರ್ಯಾಂಡ್ಸ್ಲಾಮ್ ಟೆನಿಸ್ ಟೂರ್ನಿ ಆಸ್ಟ್ರೇಲಿಯಾ ಓಪನ್ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗಗಳಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.

ಜೆಕ್ ಗಣರಾಜ್ಯದ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ಷಿಟೋವಾ ಎರಡನೇ ಸುತ್ತಿನಲ್ಲಿ ಆಘಾತ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಬುಧವಾರ ನಡೆದ ಮಹಿಳೆಯರ ವಿಭಾಗದ ಎರಡನೇ ಸುತ್ತಿನ ಪೈಪೋಟಿಯಲ್ಲಿ ಹಾಲಿ ಚಾಂಪಿಯನ್ ಸೆರೆನಾ 6–1, 6–2ರ ನೇರ ಸೆಟ್ಗಳಿಂದ ಚೀನಾ ತೈಪೆಯ ಹ್ಸಿಯೆಹ್ ಸು ವೀ ಅವರನ್ನು ಪರಾಭವಗೊಳಿಸಿದರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಸೆರೆನಾ ಆರಂಭದಿಂದಲೇ ಮನಮೋಹಕ ಆಟ ಆಡಿದರು.

ಮೊದಲ ಸೆಟ್ನ ಶುರುವಿನಲ್ಲಿಯೇ ತಮ್ಮ ಸರ್ವ್ ಕಾಪಾಡಿಕೊಂಡು ಮುನ್ನಡೆ ಗಳಿಸಿದ ಅವರು ಮರು ಗೇಮ್ನಲ್ಲಿ ಎದುರಾಳಿಯ ಸರ್ವ್ ಮುರಿದು ಮುನ್ನಡೆಯನ್ನು ಹಿಗ್ಗಿಸಿಕೊಂಡರು.

ಬಳಿಕವೂ ಅಮೆರಿಕದ ಆಟ ಗಾರ್ತಿಯ ಅಬ್ಬರ ಮುಂದುವರಿ ಯಿತು. ಪಾದರಸದಂತಹ ಚಲನೆ ಹಾಗೂ ಮಿಂಚಿನ ರಿಟರ್ನ್ಗಳ ಮೂಲಕ ಎದು ರಾಳಿಯ ಮೇಲೆ ಪೂರ್ಣ ಪ್ರಭುತ್ವ ಸಾಧಿಸಿದ ಅವರು ಸುಲಭವಾಗಿ ಸೆಟ್ ಗೆದ್ದು ಮುನ್ನಡೆ ಕಂಡುಕೊಂಡರು.

ಎರಡನೇ ಸೆಟ್ನಲ್ಲಿ ಡಬಲ್ಸ್ ವಿಭಾಗದ ಪರಿಣತ ಆಟಗಾರ್ತಿ ಸು ವೀ ತಿರುಗೇಟು ನೀಡಬಹುದೆಂದು ಭಾವಿಸ ಲಾಗಿತ್ತು. ಆದರೆ ಸೆರೆನಾ ಯಾವ ಹಂತ ದಲ್ಲಿಯೂ ತಪ್ಪಿಗೆ ಆಸ್ಪದ ನೀಡಲಿಲ್ಲ.

ಅಮೆರಿಕದ ಆಟಗಾರ್ತಿಯ ರ್ಯಾಕೆಟ್ನಿಂದ ಬಿರುಗಾಳಿ ವೇಗದಲ್ಲಿ ಹೊರಹೊಮ್ಮುತ್ತಿದ್ದ ಸರ್ವ್ಗಳನ್ನು ರಿಟರ್ನ್ ಮಾಡಲು ಪ್ರಯಾಸ ಒಟ್ಟ ಸು ವೀ ಮತ್ತೆ ಹಿನ್ನಡೆ ಅನುಭವಿಸಿದರು. ಇದು ಅವರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿತು. ಇದನ್ನು ಮನಗಂಡ ಸೆರೆನಾ ಚುರುಕಿನ ಡ್ರಾಪ್ ಮತ್ತು ಅಮೋಘ ಕ್ರಾಸ್ಕೋರ್ಟ್ ಸ್ಮ್ಯಾಷ್ಗಳನ್ನು ಸಿಡಿಸಿ 60 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು.

ಶರಪೋವಾ ಜಯದ ಓಟ: ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರೆನಿಸಿರುವ ರಷ್ಯಾದ ಮರಿಯಾ ಶರಪೋವಾ ಕೂಡಾ ಮೂರನೇ ಸುತ್ತಿಗೆ ಲಗ್ಗೆ ಇಟ್ಟರು.

ವಿಶ್ವ ಕ್ರಮಾಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಶರಪೋವಾ 6–2, 6–1ರಲ್ಲಿ ಅಲೆಕ್ಸಾಂಡ್ರಾ ಸ್ಯಾಸನೊವಿಚ್ ಅವರನ್ನು ಸೋಲಿಸಿದರು.

ಕ್ವಿಟೋವಾಗೆ ಆಘಾತ: ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 4–6, 4–6ರಲ್ಲಿ ಆಸ್ಟ್ರೇಲಿಯಾದ ಡೇರಿಯಾ ಗ್ಯಾವರಿಲೋವಾ ಎದುರು ಸೋಲು ಕಂಡರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಎಲಿಜಾವೆಟಾ ಕುಲಿಚ್ಕೋವಾ 6–4, 2–6, 6–4ರಲ್ಲಿ ಮೋನಿಕಾ ನಿಕುಲೆಸ್ಕು ಎದುರೂ, ಕ್ರಿಸ್ಟಿನಾ ಮ್ಲಾಡೆನೊವಿಚ್ 6–1, 7–6ರಲ್ಲಿ ನಿಕೊಲೆ ಗಿಬ್ಸ್ ಮೇಲೂ, ಕಾರ್ಲಾ ಸ್ವಾರೆಜ್ 6–7, 6–2, 6–2ರಲ್ಲಿ ಮರಿಯಾ ಸಕ್ಕಾರಿ ವಿರುದ್ಧವೂ, ರಾಬರ್ಟಾ ವಿನ್ಸಿ 6–2, 6–3ರಲ್ಲಿ ಇರಿನಾ ಫಾಲ್ಕೋನಿ ಮೇಲೂ, ಅನಾ ಲೆನಾ ಫ್ರಿಯೆಡ್ಸಾಮ್ 6–3, 6–4ರಲ್ಲಿ ವಾಂಗ್ ಕ್ಸಿಯಾಂಗ್ ಎದುರೂ, ಅಗ್ನಿಸ್ಕಾ ರಾಡ್ವಾಂಸ್ಕಾ 6–4, 6–2ರಲ್ಲಿ ಯೂಜ್ನಿ ಬೌಷರ್ಡ್ ವಿರುದ್ಧವೂ, ಲೌರೆನ್ ಡೇವಿಸ್ 7–6ರಲ್ಲಿ ಮಾಗ್ದಲೆನಾ ರೆಬಾರಿಕೋವಾ ಎದುರೂ, ಕ್ಯಾತೆರಿನಾ ಬೊಂಡಾರೆಂಕೊ 6–1, 7–5ರಲ್ಲಿ ಸ್ವೆಟ್ಲಾನಾ ಕುಜ್ನೆತ್ಸೋವಾ ಮೇಲೂ, ಬೆಲಿಂದಾ ಬೆನ್ಕಿಕ್ 6–3, 6–3 ರಲ್ಲಿ ಟೈಮಿ ಬಾಬೊಸ್ ವಿರುದ್ಧವೂ, ಡೆರಿಯಾ ಕಸಾತ್ಕಿನಾ 6–4, 6–3ರಲ್ಲಿ ಅನಾ ಕೊಂಜುಹ್ ಎದುರೂ, ಮಾರ್ಗರಿಟಾ ಗ್ಯಾಸ್ಪರ್ಯಾನ್ 6–4, 6–4 ರಲ್ಲಿ ಕುರುಮಿ ನಾರಾ ಮೇಲೂ ಹಾಗೂ ಯೂಲಿಯಾ ಪುಟಿನ್ತ್ಸೆವಾ 6–3, 6–1 ರಲ್ಲಿ ಕ್ಸಿನ್ಯುನ್ ಹಾನ್ ವಿರುದ್ಧವೂ ಗೆಲುವು ತಮ್ಮದಾಗಿಸಿಕೊಂಡರು.

ಜೊಕೊವಿಚ್ಗೆ ಗೆಲುವು: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ನಿರೀಕ್ಷೆಯಂತೆಯೇ ಗೆಲುವಿನ ಸಿಹಿ ಸವಿದರು.

ಎರಡನೇ ಸುತ್ತಿನಲ್ಲಿ ಜೊಕೊವಿಚ್ 6–1, 6–2, 7–6ರಲ್ಲಿ ಫ್ರಾನ್ಸ್ನ ಕ್ವೆಂಟಿನ್ ಹಾಲಿಸ್ ಎದುರು ವಿಜಯಿಯಾದರು.

ಫೆಡರರ್ ಜಯದ ಓಟ: ಸ್ವಿಟ್ಜರ್ಲೆಂಡ್ನ ವಿಶ್ವದ ಮೂರನೇ ರ್ಯಾಂಕ್ನ ಆಟಗಾರ ರೋಜರ್ ಫೆಡರರ್ 6–3, 7–5, 6–1ರಲ್ಲಿ ಅಲೆಕ್ಸಾಂಡರ್ ಡೊಗೊಪೊಲೊವ್ ಅವರನ್ನು ಪರಾಭವಗೊಳಿಸಿದರು.

ಇತರ ಪಂದ್ಯಗಳಲ್ಲಿ ಆ್ಯಂಡ್ರೆಸ್ ಸೆಪ್ಪಿ 7–5, 6–4, 6–4ರಲ್ಲಿ ಡೆನಿಸ್ ಕುಡ್ಲಾ ಎದುರೂ, ಫೆಡೆರಿಕೊ ಡೆಲ್ ಬೊನಿಸ್ 7–6, 3–6, 6–7, 7–5, 6–2ರಲ್ಲಿ ರೆಂಜಾ ಒಲಿವೊ ಮೇಲೂ, ಗಿಲ್ಲೆಸ್ ಸಿಮೊನ್ 6–3, 5–7, 7–6, 4–6, 7–5ರಲ್ಲಿ ಎವ್ಜೆನಿ ಡೊನ್ಸ್ಕೊಯ್ ಎದುರೂ, ಜೋ ವಿಲ್ಫ್ರೆಡ್ ಸೊಂಗಾ 7–5, 6–1, 6–4ರಲ್ಲಿ ಓಮರ್ ಜಸಿಕಾ ಮೇಲೂ, ಪಿಯೆರೆ ಹ್ಯೂಸ್ ಹರ್ಬರ್ಟ್ 6–3, 6–4, 6–0ರಲ್ಲಿ ನೊಹಾ ರುಬಿನ್ ವಿರುದ್ಧವೂ, ಗುಲ್ಲೆರೆಮೊ ಗಾರ್ಸಿಯಾ ಲೊಪೆಜ್ 4–6, 6–1, 7–6, 6–3ರಲ್ಲಿ ಡೇನಿಯಲ್ ಬ್ರಾಂಡ್ಸ್ ಮೇಲೂ, ಕೀ ನಿಶಿಕೋರಿ 6–3, 7–6, 6–3ರಲ್ಲಿ ಆಸ್ಟಿನ್ ಕ್ರಾಜಿಕೆಕ್ ವಿರುದ್ಧವೂ, ಗ್ರಿಗೊರ್ ಡಿಮಿಟ್ರೊವ್ 6–3, 4–6, 6–2, 7–5ರಲ್ಲಿ ಮಾರ್ಕೊ ಟ್ರುಂಗೆಲ್ಲಿಟಿ ಮೇಲೂ, ಡೋಮಿನಿಕ್ ತೆಯೆಮ್ 6–3, 6–1, 6–3ರಲ್ಲಿ ನಿಕೊಲಾಸ್ ಅಲ್ಮಾರ್ಗೊ ವಿರುದ್ಧವೂ, ಡೇವಿಡ್ ಗಫಿನ್ 6–4, 0–6, 6–4, 6–2ರಲ್ಲಿ ದಮಿರ್ ಜುಮ್ಹುರ್ ಮೇಲೂ, ಮರಿನ್ ಸಿಲಿಕ್ 6–4, 6–3, 7–6ರಲ್ಲಿ ಅಲ್ಬರ್ಟ್ ರಾಮೊಸ್ ಎದುರೂ, ರಾಬರ್ಟೊ ಬೌಟಿಸ್ಟಾ 4–6, 6–2, 4–6, 6–2, 6–1ರಲ್ಲಿ ದುಸಾನ್ ಲಾಜೊವಿಚ್ ಮೇಲೂ, ನಿಕ್ ಕಿರ್ಗಿಯೊಸ್ 6–4, 7–5, 7–6ರಲ್ಲಿ ಪ್ಯಾಬ್ಲೊ ಕ್ಯುವಾಸ್ ಎದುರೂ ಹಾಗೂ ಥಾಮಸ್ ಬರ್ಡಿಕ್ 6–4, 6–0, 6–3ರಲ್ಲಿ ಮಿರ್ಜಾ ಬೇಸಿಕ್ ವಿರುದ್ಧವೂ ಗೆದ್ದರು.

ಭಾರತಕ್ಕೆ ಮಿಶ್ರಫಲ
ಆಸ್ಟ್ರೇಲಿಯಾ ಓಪನ್ನ ಮೂರನೇ ದಿನವಾದ ಬುಧವಾರ ಭಾರತಕ್ಕೆ ಮಿಶ್ರ ಫಲ ಲಭಿಸಿತು.

ಪುರುಷರ ಡಬಲ್ಸ್ ವಿಭಾಗದ ಆರಂಭಿಕ ಸುತ್ತಿನಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ಗಿಲ್ಲೆಸ್ ಮುಲ್ಲರ್ 7–6, 3–6, 6–4ರಲ್ಲಿ ಅಲೆಕ್ಸ್ ಬೋಲ್ಟ್ ಮತ್ತು ಆ್ಯಂಡ್ರೂ ವಿಟ್ಟಿಂಗ್ಟನ್ ಎದುರು ಗೆಲುವು ಗಳಿಸಿದರು.

ಈ ವಿಭಾಗದ ಮತ್ತೊಂದು ಪಂದ್ಯದಲ್ಲಿ ಭಾರತದ ಲಿಯಾಂಡರ್ ಪೇಸ್ ಮತ್ತು ಫ್ರಾನ್ಸ್ನ ಜೆರೆಮಿ ಚಾರ್ಡಿ 3–6, 4–6ರಲ್ಲಿ ಜುವಾನ್ ಸೆಬಾಸ್ಟಿಯನ್ ಮತ್ತು ರಾಬರ್ಟ್ ಫರಾ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.