ಬೆಂಗಳೂರು: ಏಳನೇ ವರ್ಷದ ರಾಷ್ಟ್ರೀಯ ಸಬ್ ಜೂನಿಯರ್ ‘ಬಿ’ ಡಿವಿಷನ್ ಬಾಲಕರ ಹಾಕಿ ಚಾಂಪಿಯನ್ಷಿಪ್ ಸೋಮವಾರ ಇಲ್ಲಿ ಆರಂಭವಾಗಲಿದೆ.
ರಾಜ್ಯದಿಂದ ಹಾಕಿ ಬೆಂಗಳೂರು ಮತ್ತು ಹಾಕಿ ಕೂರ್ಗ್ ತಂಡಗಳು ಪಾಲ್ಗೊಳ್ಳಲಿವೆ. ಟೂರ್ನಿಯಲ್ಲಿ ಒಟ್ಟು 23 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಅಂತಿಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಮುಂದಿನ ವರ್ಷ ‘ಎ’ ಡಿವಿಷನ್ ಟೂರ್ನಿಗೆ ಅರ್ಹತೆ ಪಡೆದುಕೊಳ್ಳಲಿವೆ.