ಪಂಚುಕುಲಾ: ಮಿನರ್ವಾ ಪಂಜಾಬ್ ತಂಡವು ಗುರುವಾರ ಐಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಅಂತಿಮ ಲೀಗ್ ಪಂದ್ಯದಲ್ಲಿ ಮಿನರ್ವಾ ತಂಡ 1–0 ಗೋಲಿನಿಂದ ಚರ್ಚಿಲ್ ಬ್ರದರ್ಸ್‌ಗೆ ಸೋಲುಣಿಸಿತು. ವಿಲಿಯಮ್ ಅಸಿಡು ಒಪೊಕು 15ನೇ ನಿಮಿಷದಲ್ಲಿ ಜಯದ ಗೋಲು ದಾಖಲಿಸಿದರು. 17 ಪಂದ್ಯಗಳಲ್ಲಿ ಈ ತಂಡ 32 ಪಾಯಿಂಟ್ಸ್ ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನ ಸಾಧಿಸಿದೆ.

ನೆರೋಕಾ ಎಫ್‌ಸಿ, ಮೋಹನ್ ಬಾಗನ್ ಹಾಗೂ ಈಸ್ಟ್ ಬೆಂಗಾಲ್ ತಂಡಗಳು ಮೊದಲ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ನಡೆಸಿದ್ದವು.

ನೆರೋಕಾ ರನ್ನರ್ಸ್ ಅಪ್: ಈಸ್ಟ್ ಬೆಂಗಾಲ್ ತಂಡದ ಎದುರು ಡ್ರಾ ಸಾಧಿಸಿದ ನೆರೋಕಾ ಎಫ್‌ಸಿ ತಂಡ ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದೆ. ಗೋಕುಲಮ್ ಕೇರಳ ತಂಡದ ಎದುರು ಡ್ರಾ ಮಾಡಿಕೊಂಡಿರುವ ಮೋಹನ್ ಬಾಗನ್ ಮೂರನೇ ಸ್ಥಾನ ಪಡೆದರೆ, ಈಸ್ಟ್ ಬೆಂಗಾಲ್ ನಾಲ್ಕನೇ ಸ್ಥಾನ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.