ಕಾರವಾರ: ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದಲ್ಲಿ ನಡೆಯಲಿರುವ `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪ್ರಾಯೋಜಕತ್ವದ ಕೆ.ಎ. ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಸ್ಪರ್ಧೆಗೆ ಕಡಲತಡಿಯ ಈ ನಗರ ಸಜ್ಜುಗೊಂಡಿದೆ.

ಭಾನುವಾರ ಮುಂಜಾನೆ ನಡೆಯಲಿರುವ ರಾಜ್ಯದ ಈ ಪ್ರತಿಷ್ಠಿತ ರಸ್ತೆ ಓಟದ ವಿವಿಧ ವಿಭಾಗಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದಾರೆ. ಪುರುಷರ ವಿಭಾಗದಲ್ಲಿ 12ಕಿ.ಮೀ. ಮತ್ತು ಮಹಿಳಾ ವಿಭಾಗದಲ್ಲಿ 6 ಕಿ.ಮೀ. ದೂರವನ್ನು ಸ್ಪರ್ಧಿಗಳು ಕ್ರಮಿಸಬೇಕು. ಹದಿನಾರು ವರ್ಷದೊಳಗಿನ ಬಾಲಕ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಗಳು 2.5ಕಿ.ಮೀ. ದೂರ ಓಡಬೇಕು.

ಕರ್ನಾಟಕದ ಕ್ರೀಡಾ ಕ್ಷೇತ್ರದಲ್ಲಿ ನಿರಂತರವಾಗಿ ಎರಡು ದಶಕಗಳಿಂದ ಈ ಸ್ಪರ್ಧೆ ನಡೆಯುತ್ತಾ ಬಂದಿದ್ದು, ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ದೂರ ಅಂತರದ ಓಟಗಾರರು ಒಂದಲ್ಲಾ ಒಂದು ಸಲ ಈ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

2000ರಿಂದ 2002ರವರೆಗೆ ಮೂರು ವರ್ಷಗಳ ಕಾಲ ಈ ಕೂಟವನ್ನು ಬೆಂಗಳೂರಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಂಘಟಿಸಲಾಗಿತ್ತು.

ಇದರಿಂದ ಹೆಚ್ಚಿನ ಬಹುಮಾನಗಳನ್ನು ಹೊರ ರಾಜ್ಯದ ಮಂದಿಯೇ ಗೆಲ್ಲುತ್ತಿದ್ದುದು ಸಾಮಾನ್ಯವಾಗಿದ್ದು, ಕರ್ನಾಟಕದ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತರು ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ನವರು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈ ಓಟದ ಸ್ಪರ್ಧೆಗಳನ್ನು ಸಂಘಟಿಸುತ್ತಿದ್ದಾರೆ.

ಕೆ.ಎ.ನೆಟ್ಟಕಲ್ಲಪ್ಪನವರು ಕರ್ನಾಟಕ ಕಂಡ ಅಪರೂಪದ ಕ್ರೀಡಾಡಳಿತಗಾರ. 60 ಮತ್ತು 70ರ ದಶಕದಲ್ಲಿ ಇವರು ಕರ್ನಾಟಕ ಅಮೆಚೂರ್ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ, ಭಾರತ ಒಲಿಂಪಿಕ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಇವರು 1971ರಲ್ಲಿ ಕಟ್ಟಿದ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ನಿರಂತರವಾಗಿ ಅಥ್ಲೆಟಿಕ್ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಾಜ್ಯದ ಅಥ್ಲೆಟಿಕ್ ಪ್ರತಿಭಾನ್ವೇಷಣೆಯಲ್ಲಿ ಈ ಕ್ಲಬ್ಗೆ ಮಹತ್ತರ ಸ್ಥಾನವಿದೆ. 1976ರ ಜೂನ್ ತಿಂಗಳಲ್ಲಿ ನೆಟ್ಟಕಲ್ಲಪ್ಪ ಅವರು ನಿಧನರಾದರು. ಆಗ ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು.

ಅವರ ಸ್ಮರಣಾರ್ಥ 1977ರಿಂದ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ರಸ್ತೆ ಓಟದ ಸ್ಪರ್ಧೆಗಳನ್ನು ಸಂಘಟಿಸುತ್ತಾ ಬಂದಿದೆ. ಮೊದಲಿಗೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸ್ಪರ್ಧೆಗಳನ್ನು 2003ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ.

ಈವರೆಗೆ ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಗುಲ್ಬರ್ಗ, ಹುಬ್ಬಳ್ಳಿ, ವಿಜಾಪುರ, ಹಾಸನ, ಚಿತ್ರದುರ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ರಾಮನಗರ, ಬಾಗಲಕೋಟೆಗಳಲ್ಲಿ ಈ ಕೂಟವನ್ನು ನಡೆಸಲಾಗಿದೆ. ಪ್ರಸಕ್ತ ವರ್ಷ ಈ ಸ್ಪರ್ಧೆಗಳು ನಾಳೆ (ಭಾನುವಾರ) ಈ ನಗರದಲ್ಲಿಯೂ, ಜೂನ್ 30ರಂದು ರಾಯಚೂರಿನಲ್ಲಿಯೂ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.