ಗೋಲ್ಡ್ ಕೋಸ್ಟ್, ಆಸ್ಟ್ರೇಲಿಯಾ: ಎದುರಾಳಿಯ ಹೆಡೆಮುರಿಕಟ್ಟಿದ ಭಾರತ ಪೈಲ್ವಾನ ಬಜರಂಗ್ ಪುನಿಯಾ ಅವರು ಕಾಮನ್ ವೆಲ್ತ್ ಕ್ರೀಡಾಕೂಟದ ಕುಸ್ತಿ ಅಖಾಡದಲ್ಲಿ ಚಿನ್ನದ ನಗೆ ಬೀರಿದರು.

ಅತ್ಯುತ್ತಮ ಪಟ್ಟುಗಳನ್ನು ಹಾಕಿ ಎದುರಾಳಿಯನ್ನು ಮಣಿಸಿದ ಬಜರಂಗ್ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದರು.

65 ಕೆ.ಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ನಲ್ಲಿ ಕಣಕ್ಕೆ ಇಳಿದ ಹರಿಯಾಣದ 24ರ ಹರೆಯದ ಕುಸ್ತಿಪಟು ಬಜರಂಗ್ ಪುನಿಯಾ ವೇಲ್ಸ್ ಕೇನ್ ಚಾರಿಗ್ ಅವರನ್ನು 10–0 ಅಂಕಗಳೊಂದಿಗೆ ಮಣಿಸಿದರು.

ಬಜರಂಗ್ ನಾಲ್ಕು ವರ್ಷಗಳ ಹಿಂದೆ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಈ ಪಂದ್ಯದಲ್ಲಿ ಎದುರಾಳಿಗೆ ಒಂದು ಅಂಕವನ್ನೂ ಪಡೆಯಲು ಅವಕಾಶ ನೀಡದೆ, ಅತ್ಯುತ್ತಮವಾಗಿ ಪಟ್ಟುಗಳನ್ನು ಹಾಕಿ ಮಣಿಸಿದ್ದಾರೆ.

ಕ್ರೀಟಾಕೂಟದ ಎಂಟನೇ ದಿನದ ಪಂದ್ಯದಲ್ಲಿ ಗಳಿಸಿದ ಈ ಚಿನ್ನದೊಂದಿಗೆ ಭಾರತ 16 ಚಿನ್ನದ ಪದಕಗಳನ್ನು ಗಳಿಸಿದೆ.

ಚಿನ್ನ ಗೆದ್ದ ಸಂಭ್ರಮದಲ್ಲಿ ಬಜರಂಗ್ ಪುನಿಯಾ. –ಚಿತ್ರಗಳು: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.