ಬೆಂಗಳೂರು: ಹಳೆಯ ಜೊತೆಗಾರ ಐಸಾಮ್ ಉಲ್ ಹಕ್ ಖುರೇಷಿ ಜೊತೆ ಮತ್ತೆ ಒಂದಾಗಿರುವ ಭಾರತದ ರೋಹನ್ ಬೋಪಣ್ಣ ಹೊಸ ವರ್ಷದಿಂದ ಉತ್ತಮ ಪ್ರದರ್ಶನ ತೋರುವುದಾಗಿ ಹೇಳಿದ್ದಾರೆ.

ಭಾರತದ ಬೋಪಣ್ಣ ಮತ್ತು ಪಾಕಿಸ್ತಾನದ ಖುರೇಷಿ 2010ರಲ್ಲಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ನಂತರ ಈ ಜೋಡಿ ಬೇರೆ ಬೇರೆಯಾಗಿದ್ದರು. ಈ ವೇಳೆ ಬೋಪಣ್ಣ ಐದು ಸಲ ಜೊತೆಗಾರರನ್ನು ಬದಲಿಸಿದ್ದರು. ಈಗ ‘ಇಂಡೋ ಪಾಕ್ ಎಕ್ಸ್‌ಪ್ರೆಸ್‌್’ ಖ್ಯಾತಿಯ ಜೋಡಿ ಮತ್ತೆ ಒಂದಾಗಿ ಆಡಲು ಮುಂದಾಗಿದೆ.

ಮಂಗಳವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಖುರೇಷಿ ಮತ್ತು ನಾನು ಅತ್ಯುತ್ತಮ ಡಬಲ್ಸ್‌್ ಆಟಗಾರರು. ಮುಂದಿನ ವರ್ಷದಿಂದ ನಮ್ಮ ಪ್ರದರ್ಶನ ಹೇಗಿರುತ್ತದೆ ನೀವೇ ನೋಡಿ. ನಾವಿಬ್ಬರು ಮೊದಲು ಹೇಗೆ ಆಡುತ್ತಿದ್ದೇವೋ, ಅದೇ ರೀತಿಯ ಆಟವನ್ನು ಮುಂದುವರಿಸುತ್ತೇವೆ’ ಎಂದರು.

ಮೊದಲು ಮಹೇಶ್ ಭೂಪತಿ ಮತ್ತು ಬೋಪಣ್ಣ ಜೊತೆಯಾಗಿ ಆಡುತ್ತಿದ್ದರು. ಆದರೆ, ನಂತರದ ದಿನಗಳಲ್ಲಿ ಬೋಪಣ್ಣ ಅವರು ರಾಜೀವ್ ರಾಮ್, ಮಾರ್ಸೆಲೊ ಮೆಲೊ, ಕಾಲಿಕ್ ಫ್ಲೆಮಿಂಗ್ ಮತ್ತು ಎಡ್ವರ್ಡ್‌್ ರೋಜರ್ ವಸ್ಸೆಲಿನ್ ಜೊತೆ ಆಡಿದ್ದರು. 2014ರ ಜನವರಿಯಲ್ಲಿ ಚೆನ್ನೈನಲ್ಲಿ ಎಟಿಪಿ ಟೂರ್ನಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.