ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಾ ಪಂದ್ಯದಲ್ಲಿ ಸೌತ್ ಯುನೈಟೆಡ್

ಫುಟ್‌ಬಾಲ್
Last Updated 17 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ಮತ್ತು ಕೆಜಿಎಫ್ ಅಕಾಡೆಮಿ ತಂಡಗಳ ನಡುವಿನ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯ 1-1 ಗೋಲಿನ ಡ್ರಾದಲ್ಲಿ ಕೊನೆಗೊಂಡಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಐದನೇ ನಿಮಿಷದಲ್ಲಿ ರಾಜೇಶ್ ಗೋಲು ಗಳಿಸಿ ಕೆಜಿಎಫ್‌ಗೆ ಮುನ್ನಡೆ ತಂದಿತ್ತರು. ಆದರೆ ಸೌತ್ ಯುನೈಟೆಡ್ ಮಣಿವಣ್ಣನ್ ತಂದಿತ್ತ ಗೋಲಿನ ನೆರವಿನಿಂದ ಡ್ರಾ ಸಾಧಿಸಿತು.

ಎಲ್‌ಆರ್‌ಡಿಇ ಮತ್ತು ಬಿಯುಎಫ್‌ಸಿ ನಡುವಿನ `ಎ' ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು.

ಸೋಮವಾರದ ಪಂದ್ಯಗಳಲ್ಲಿ ಪೋಸ್ಟಲ್- ಡಿವೈಎಸ್‌ಎಸ್ ಮತ್ತು ಬೆಂಗಳೂರು ಮಾರ್ಸ್‌- ಎಸ್‌ಎಐ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT