ನಂಜನಗೂಡು: ಕರ್ನಾಟಕದ ತಂಡಗಳು ಭಾರತ ಥ್ರೋಬಾಲ್ ಫೆಡರೇಷನ್ ಹಾಗೂ ಸ್ಥಳೀಯ ಸಿಟಿಜನ್ ಶೈಕ್ಷಣಿಕ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ನಡೆದ ರಾಷ್ಟ್ರೀಯ 21ನೇ ಸಬ್ ಜೂನಿಯರ್ ಥ್ರೋಬಾಲ್ ಚಾಂಪಿಯನ್ಷಿಪ್ನ ಅಂತಿಮ ಘಟ್ಟದಲ್ಲಿ ಎಡವಿ ನಿರಾಸೆಗೊಂಡವು.
ಭಾನುವಾರ ನಡೆದ ಫೈನಲ್ನಲ್ಲಿ ಕರ್ನಾಟಕದ ಬಾಲಕರ ತಂಡವನ್ನು 22-25, 25-19, 25-22ರಿಂದ ಸೋಲಿಸಿದ ಹರಿಯಾಣ. ಹರಿಯಾಣದ ಆಟಗಾರ್ತಿಯರೇ 24-26, 25-16, 25-20 ರಿಂದ ಕರ್ನಾಟಕವನ್ನು ಸೋಲಿಸಿ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.