ಪ್ಯಾರಿಸ್: ‘ನನ್ನ ಮೇಲಿದ್ದ ಹಣದ ವ್ಯವಹಾರದ ಆರೋಪವು ಸಾಬೀತಾಗಿಲ್ಲ. ಆದ್ದರಿಂದ ಅಮಾನತು ಶಿಕ್ಷೆಯನ್ನು ತೆರವುಗೊಳಿಸಬೇಕು’ ಎಂದು ಮೈಕೆಲ್ ಪ್ಲಾಟಿನಿ ಫಿಫಾಗೆ ಆಗ್ರಹಿಸಿದ್ದಾರೆ.
ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ನನ್ನ ಮೇಲಿನ ಅಮಾನತು ಶಿಕ್ಷೆಯನ್ನು ತೆರವುಗೊಳಿಸಲು ಫಿಫಾ ಧೈರ್ಯ ಮಾಡುವುದೇ’ ಎಂದು ಪ್ರಶ್ನಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಫಿಫಾ ಅಧ್ಯಕ್ಷರಾಗಿದ್ದ ಪ್ಲಾಟಿನಿ ಅವರು ಹಣದ ಅವ್ಯವಹಾರ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ್ದರು. ಅವರಿಗೆ ನಾಲ್ಕು ವರ್ಷಗಳ ಅಮಾನತು ಶಿಕ್ಷೆ ವಿಧಿಸಲಾಗಿತ್ತು.
‘ಸ್ವಿಸ್ ಕೋರ್ಟ್ನಲ್ಲಿ ಈ ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ. ಆದ್ದರಿಂದ ಶಿಕ್ಷೆಗೆ ನಾನು ಅರ್ಹನಲ್ಲ’ ಎಂದು ಪ್ಲಾಟಿನಿ ವ್ಯಂಗ್ಯವಾಡಿದ್ದಾರೆ.