ನವದೆಹಲಿ (ಪಿಟಿಐ): ಥಾಯ್ಲೆಂಡ್ ಓಪನ್ನಲ್ಲಿ ಚಾಂಪಿಯನ್ ಆಗಿರುವ ಸೈನಾ ನೆಹ್ವಾಲ್ ಈಗ ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಬುಧವಾರ ಜಕಾರ್ತದಲ್ಲಿ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿ ಆರಂಭವಾಗಲಿದ್ದು ಸೈನಾ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಲಂಡನ್ ಒಲಿಂಪಿಕ್ಸ್ನಲ್ಲಿ ಪದಕದ ಭರವಸೆ ಮೂಡಿಸಿರುವ ವಿಶ್ವದ ಐದನೇ ರ್ಯಾಂಕ್ನಆಟಗಾರ್ತಿ ನೆಹ್ವಾಲ್ ತಮ್ಮ ಮೊದಲ ಪಂದ್ಯದಲ್ಲಿ ಜಪಾನ್ನ ಸಯಾಕಾ ಸ್ಯಾಟೊ ಅವರನ್ನು ಎದುರಿಸಲಿದ್ದಾರೆ. ಸ್ಯಾಟಿ ಇದುವರೆಗಿನ ಮುಖಾಮುಖಿಯಲ್ಲಿ ಹೈದರಾಬಾದ್ನ ಆಟಗಾರ್ತಿ 3-1ರಲ್ಲಿ ಮುಂದಿದ್ದಾರೆ.

ಆದರೆ ಈ ಟೂರ್ನಿಯಲ್ಲಿ ಚೀನಾದ ಅಗ್ರ ಆಟಗಾರ್ತಿಯರ ಸವಾಲು ಎದುರಿಸಬೇಕಾಗಿದೆ. `ಇಂಡೊನೇಷ್ಯಾ ಸರಣಿ ಸದಾ ಕಠಿಣವಾಗಿರುತ್ತದೆ. ಚೀನಾದ ಆಟಗಾರ್ತಿಯರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅದಕ್ಕೆ ಕಾರಣ. ಪಂದ್ಯದ ದಿನ ಯಾವ ಭಾವನೆಯಲ್ಲಿ ಇರುತ್ತೀರಿ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಪ್ರಶಸ್ತಿ ಗೆಲ್ಲುತ್ತೇನೆಂಬ ಭರವಸೆಯನ್ನು ನಾನು ನೀಡುವುದಿಲ್ಲ. ಆದರೆ ಶೇಕಡಾ 100ರಷ್ಟು ಪ್ರಯತ್ನ ಹಾಕಿ ಆಡುತ್ತೇನೆ~ ಎಂದು ಸೈನಾ ನುಡಿದಿದ್ದಾರೆ.

ಸೈನಾ ಅಲ್ಲದೇ, ಪಿ.ಕಷ್ಯಪ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಹಾಗೂ ವಿ.ದಿಜು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಕಷ್ಯಪ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಗ್ವಾಟಿಮಾಲಾ ಕೆವಿನ್ ಕಾರ್ಡೊನ್ ಅವರನ್ನು ಎದುರಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.