ಮಡಗಾಂವ್: ವಿಕ್ಟರ್ ಗೇಬ್ರಿಯಲ್ ಮೌರಾ ಡಿ ಒಲಿವಿರಾ ತಂದಿತ್ತ ಎರಡು ಗೋಲುಗಳ ಬಲದಿಂದ ಬ್ರೆಜಿಲ್ ತಂಡ 17 ವರ್ಷದೊಳಗಿನವರ ಚೊಚ್ಚಲ ಬ್ರಿಕ್ಸ್ ಫುಟ್‌ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.

ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಹೋರಾಟದಲ್ಲಿ ಬ್ರೆಜಿಲ್ 5–1 ಗೋಲುಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿತು.
ಬಲಿಷ್ಠ ಆಟಗಾರರ ಕಣಜ ಎನಿಸಿದ್ದ ಬ್ರೆಜಿಲ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

ಮೊದಲ 23 ನಿಮಿಷಗಳವರೆಗೆ ದಕ್ಷಿಣ ಆಫ್ರಿಕಾ ತಂಡದವರು ಪ್ರಬಲ ಪೈಪೋಟಿ ಒಡ್ಡಿದರು. 24ನೇ ನಿಮಿಷದಲ್ಲಿ ಬ್ರೆಜಿಲ್ ಖಾತೆ ತೆರೆಯಿತು. ಪಾಲ್ ಹೆನ್ರಿಕ್ ಸಂಪಿಯೊ ಫಿಲ್ಹೊ ಚೆಂಡನ್ನು ಗುರಿ ಮುಟ್ಟಿಸಿದರು.

35ನೇ ನಿಮಿಷದಲ್ಲಿ ಡಿ ಒಲಿವಿರಾ ಜೂನಿಯರ್ ಗೋಲು ಗಳಿಸಿ 2–0ರ ಮುನ್ನಡೆಗೆ ಕಾರಣರಾದರು. ಇದರ ಬೆನ್ನಲ್ಲೆ ವಿಕ್ಟರ್ ಡಿ ಒಲಿವಿರಾ ಚೆಂಡನ್ನು ಗುರಿ ಮುಟ್ಟಿಸಿದರು. ಹೀಗಾಗಿ ತಂಡ 3–0 ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ಉತ್ತರಾರ್ಧದಲ್ಲೂ ಬ್ರೆಜಿಲ್ ತಂಡ ಮಿಂಚಿನ ಆಟ ಆಡಿತು. 61ನೇ ನಿಮಿಷದಲ್ಲಿ ವಿಕ್ಟರ್ ಡಿ ಒಲಿವಿರಾ ಮತ್ತೊಮ್ಮೆ ಮೋಡಿ ಮಾಡಿದರು. ಆದರೆ 89ನೇ ನಿಮಿಷದಲ್ಲಿ ಹರಿಣಗಳ ನಾಡಿನ ತಂಡದ ಸಿಮಿಸೊ ಬೊಫೆಲಾ ಗೋಲು ದಾಖಲಿಸಿ ಹಿನ್ನಡೆಯನ್ನು 1–4ಕ್ಕೆ ತಗ್ಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.