ಬೆಂಗಳೂರು: ಸೌತ್ ವೆಸ್ಟರ್ನ್ ರೈಲ್ವೆ (ಎಸ್ಡಬ್ಲ್ಯುಆರ್) ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆಲುವು ಪಡೆದರು.
ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಸ್ಡಬ್ಲ್ಯುಆರ್ 20-25, 25-23, 25-22, 25-22 ರಲ್ಲಿ ಪೋಸ್ಟಲ್ ತಂಡವನ್ನು ಮಣಿಸಿತು. ಮೊದಲ ಸೆಟ್ನಲ್ಲಿ ಸೋಲು ಅನುಭವಿಸಿದರೂ ಮರುಹೋರಾಟ ನಡೆಸಿದ ಎಸ್ಡಬ್ಲ್ಯುಆರ್ ಪರ ಹರೀಶ್ ಮತ್ತು ಮಹೇಶ್ ಉತ್ತಮ ಪ್ರದರ್ಶನ ನೀಡಿದರು.
ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟ್ಸ್ ಹಾಸ್ಟೆಲ್ ತಂಡ 25-21, 25-18, 25-23 ರ ನೇರ ಸೆಟ್ಗಳಿಂದ ಬಿಇಎಲ್ ವಿರುದ್ಧ ಜಯ ಸಾಧಿಸಿತು. ಒಂದು ಗಂಟೆಯ ಕಾಲ ನಡೆದ ಈ ಹೋರಾಟದಲ್ಲಿ ಚೇತನ್ ಮತ್ತು ಭರತ್ ಅವರು ಸ್ಪೋರ್ಟ್ಸ್ ಹಾಸ್ಟೆಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.