ಮ್ಯಾಡ್ರಿಡ್ (ಎಎಫ್ಪಿ): ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಗರೆತ್ ಬಾಲೆ ತಂದಿತ್ತ ತಲಾ ಒಂದು ಗೋಲುಗಳ ಬಲದಿಂದ ರಿಯಲ್ ಮ್ಯಾಡ್ರಿಡ್ ತಂಡ ಲಾ ಲಿಗಾ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮ್ಯಾಡ್ರಿಡ್ 3–2 ಗೋಲುಗಳಿಂದ ವಿಲ್ಲಾರಿಯಲ್ ತಂಡವನ್ನು ಹಣಿಯಿತು. ಆರಂಭದಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾಗಿದ್ದ ರಿಯಲ್ ಮ್ಯಾಡ್ರಿಡ್ ತಂಡ 0–2ರಿಂದ ಹಿಂದಿತ್ತು. ಆ ಬಳಿಕ ತಂಡ ಮಿಂಚಿನ ಆಟ ಆಡಿ ಗೆಲುವು ಒಲಿಸಿಕೊಂಡಿತು.
ಇನ್ನೊಂದು ಪಂದ್ಯದಲ್ಲಿ ಬಾರ್ಸಿ ಲೋನಾ ತಂಡ 2–1 ಗೋಲುಗಳಿಂದ ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ವಿರುದ್ಧ ಗೆದ್ದಿತು.