ನವದೆಹಲಿ: ಅನಾರೋಗ್ಯದ ಕಾರಣ ಭಾರತದ ಹರಿಂದರ್ ಪಾಲ್ ಸಂಧು ಡಬ್ಲ್ಯುಎಸ್ಎಫ್ ವಿಶ್ವ ಡಬಲ್ಸ್ ಸ್ಕ್ವಾಷ್ ಚಾಂಪಿಯನ್ಷಿಪ್ನಿಂದ ಹೊರಬಿದ್ದಿದ್ದಾರೆ.
ಮ್ಯಾಂಚೆಸ್ಟರ್ನಲ್ಲಿ ಆಗಸ್ಟ್ 1ರಿಂದ 5ರವರೆಗೆ ಚಾಂಪಿಯನ್ಷಿಪ್ ನಡೆಯಲಿದೆ.
ಇಎಸ್ಎ ವಿಶ್ವ ಸರಣಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದ ಸಂಧು ವಿಶ್ವ ಸ್ಕ್ವಾಷ್ನಲ್ಲೂ ಭಾರತದ ಭರವಸೆ ಎನಿಸಿದ್ದರು.
‘ಕೊನೆಯ ಕ್ಷಣದವರೆಗೂ ಸಂಧು ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಲಾಯಿತು. ಆದರೆ ಅವರ ಹಲ್ಲಿನಲ್ಲಿ ಊತ ಕಾಣಿಸಿಕೊಂಡ ಕಾರಣ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ರಾಷ್ಟ್ರೀಯ ಕೋಚ್ ಸಿರಸ್ ಪೊಂಚ ಹೇಳಿದ್ದಾರೆ.
ಸೌರವ್ ಘೋಷಾಲ್, ವಿಕ್ರಂ ಮನ್ಹೋತ್ರ, ಮಹೇಶ್ ಮಂಗಾವ್ಕರ್, ಜೋಷ್ನಾ ಚಿಣ್ಣಪ್ಪ ಮತ್ತು ದೀಪಿಕಾ ಪಳ್ಳಿಕಲ್ ತಂಡದಲ್ಲಿ ಇದ್ದಾರೆ.