ಮೊದಲ ಸುತ್ತಿನ ಪಂದ್ಯದಲ್ಲಿ ಹರಿಕೃಷ್ಣ ರಷ್ಯಾದ ಪೀಟರ್ ಸ್ವೀಡ್ಲರ್ ವಿರುದ್ಧ ಪಾಯಿಂಟ್ಸ್ ಹಂಚಿಕೊಂಡರು. ವಿಶ್ವ ರ್ಯಾಂಕಿಂಗ್ನಲ್ಲಿ 2758 ರೇಂಟಿಂಗ್ ಪಾಯಿಂಟ್ಸ್ಗಳೊಂದಿಗೆ 14ನೇ ಸ್ಥಾನದಲ್ಲಿರುವ ಭಾರತದ ಆಟಗಾರ ಬಿಳಿ ಕಾಯಿಗಳೊಂದಿಗೆ ಆಡಿದರು. ಆಕ್ರಮಣಕಾರಿಯಾಗಿ ಆಡಿದ ಹರಿಕೃಷ್ಣ ಇನ್ನೇನು ಪಂದ್ಯ ಗೆದ್ದುಕೊಳ್ಳುವ ಹಂತದಲ್ಲಿದ್ದಾಗ ಸ್ವೀಡ್ಲರ್ ತಮ್ಮ ಚಾಣಾಕ್ಷ ನಡೆಗಳ ಮೂಲಕ ಪಂದ್ಯವನ್ನು ಡ್ರಾಗೆ ಪರಿವರ್ತಿಸಿದರು.