ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಿತ್, ಮಾರ್ಷ್ ಅಮೋಘ ಶತಕ

ಅಭ್ಯಾಸ ಪಂದ್ಯ: ಬಸವಳಿದ ಭಾರತ ‘ಎ’ ತಂಡದ ಬೌಲರ್‌ಗಳು
Last Updated 17 ಫೆಬ್ರುವರಿ 2017, 19:40 IST
ಅಕ್ಷರ ಗಾತ್ರ

ಮುಂಬೈ: ನಾಯಕ ಸ್ಟೀವ್ ಸ್ಮಿತ್  ಹಾಗೂ ಶಾನ್ ಮಾರ್ಷ್ ಅವರ ಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಶುಕ್ರವಾರ ಇಲ್ಲಿ ಆರಂಭವಾದ ಭಾರತ ’ಎ’ ಎದುರಿನ ಅಭ್ಯಾಸ ಪಂದ್ಯದಲ್ಲಿ ಸವಾಲಿನ ಮೊತ್ತ ಗಳಿಸಿದೆ.

ಬ್ರೆಬೋರ್ನ್  ಕ್ರೀಡಾಂಗಣದಲ್ಲಿ  ಟಾಸ್ ಗೆದ್ದ ಭಾರತ ‘ಎ’ ತಂಡದ ನಾಯಕ ಹಾರ್ದಿಕ್ ಪಾಂಡ್ಯ  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.  ಮಧ್ಯಮ ವೇಗಿ ನವದೀಪ್ ಸೈನಿ ಅವರು ಆರಂಭಿಕ ಜೋಡಿ ಡೇವಿಡ್ ವಾರ್ನರ್ ಮತ್ತು ರೆನ್‌ಷಾ ಅವರನ್ನು ಬೇಗನೆ ಪೆವಿಲಿ ಯನ್‌ಗೆ ಮರಳುವಂತೆ ಮಾಡಿದರು. 55 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಪ್ರವಾಸಿ ತಂಡಕ್ಕೆ ನಾಯಕ ಸ್ಮಿತ್  (107; 161ಎ, 12ಬೌಂ, 1ಸಿ) ಮತ್ತು  ಶಾನ್ ಮಾರ್ಷ್ (104; 173ಎ, 11ಬೌಂ, 1ಸಿ)    ಅವರು ಗಟ್ಟಿ ಬುನಾದಿ ಹಾಕಿ ದರು.  ಮೂರನೇ ವಿಕೆಟ್‌ ಜೊತೆಯಾಟ ದಲ್ಲಿ  156 ರನ್‌ಗಳನ್ನು ಸೇರಿಸಿದರು.

ಒಟ್ಟು 199 ನಿಮಿಷಗಳವರೆಗೆ ಕ್ರೀಸ್‌ನಲ್ಲಿದ್ದ ಸ್ಮಿತ್ ಆಕರ್ಷಕ ಸ್ವೀಪ್ ಮತ್ತು ಕವರ್‌ಡ್ರೈವ್‌ಗಳ ಮೂಲಕ ರನ್‌ ಗಳಿಸಿದರು. ಫೀಲ್ಡರ್‌ಗಳನ್ನು ವಂಚಿಸಿ ಚೆಂಡನ್ನು ಬೌಂಡರಿಗೆರೆ ದಾಟಿಸುತ್ತಿ ದ್ದರು.  57ನೇ ಓವರ್‌ನಲ್ಲಿ ಅವರು ನಿವೃತ್ತಿ ಪಡೆದು ಪೆವಿಲಿಯನ್ ಸೇರಿದರು.
ಶಾನ್ ಮಾರ್ಷ್ ಅವರು ಸ್ಮಿತ್‌ಗೆ ಉತ್ತಮ ಜೊತೆ ನೀಡಿದರು. ತಾಳ್ಮೆಯಿಂದ ಎಸೆತಗಳನ್ನು ಎದುರಿಸಿದ ಮಾರ್ಷ್ ಅವರು ಒಂದು ಆಕರ್ಷಕ ಸಿಕ್ಸರ್ ಕೂಡ ಬಾರಿಸಿದರು.

ಬಿಸಿಲ ಧಗೆ ಹೆಚ್ಚಾಗಿದ್ದ ವಾತಾವರಣ ದಲ್ಲಿ ಮೂರುವರೆ ತಾಸು ಬ್ಯಾಟಿಂಗ್ ಮಾಡಿದ ಮಾರ್ಷ್ ಶತಕ ಬಾರಿಸಿದರು. ಅವರು ಕೂಡ 77ನೇ ಓವರ್‌ನಲ್ಲಿ  ನಿವೃತ್ತಿ ಪಡೆದು ನಿರ್ಗಮಿಸಿದರು. ಅದಕ್ಕೂ ಮುನ್ನ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ   ಪೀಟರ್ ಹ್ಯಾಂಡ್ಸ್‌ಕಂಬ್ (45; 70ಎ, 3ಬೌಂ) ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 78 ರನ್‌ಗಳನ್ನು ಪೇರಿಸಿದರು.

81ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್‌ನಲ್ಲಿ ಪೀಟರ್ ಔಟಾದ ನಂತರ ಮಿಷೆಲ್ ಮಾರ್ಷ್ (ಬ್ಯಾಟಿಂಗ್ 16) ಮತ್ತು  ಮ್ಯಾಥ್ಯೂ ವೇಡ್ (ಬ್ಯಾಟಿಂಗ್ 7)  ನಿಧಾನವಾಗಿ ಆಡಿ ದಿನದಾಟವನ್ನು ಪೂರೈಸಿದರು.
ಗೌತಮ್‌ಗೆ  ಸಿಗದ ಅವಕಾಶ
ರಣಜಿ ಋತುವಿನಲ್ಲಿ ಉತ್ತಮವಾಗಿ ಆಡಿದ್ದ ಕರ್ನಾಟಕದ ಸ್ಪಿನ್ನರ್ ಕೆ. ಗೌತಮ್ ಅವರಿಗೆ ಅಭ್ಯಾಸ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. 
ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್‌ ಅವರಿಗೆ ಅವಕಾಶ ದೊರೆಯಿತು. ಅವರು  23 ಓವರ್‌ ಬೌಲಿಂಗ್ ಮಾಡಿ 90 ರನ್‌ ನೀಡಿದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: 90 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 327 (ಡೇವಿಡ್ ವಾರ್ನರ್ 25, ಮ್ಯಾಥ್ಯೂ ರೆನ್‌ಷಾ 11, ಸ್ಟೀವ್ ಸ್ಮಿತ್ 107, ಶಾನ್ ಮಾರ್ಷ್ 104, ಪೀಟರ್ ಹ್ಯಾಂಡ್ಸ್‌ ಕಂಬ್ 45, ಮಿಷೆಲ್ ಮಾರ್ಷ್ ಬ್ಯಾಟಿಂಗ್16, ಮ್ಯಾಥ್ಯೂ ವೇಡ್ ಬ್ಯಾಟಿಂಗ್ 7, ನವದೀಪ್ ಸೈನಿ 27ಕ್ಕೆ2,  ಹಾರ್ದಿಕ್ ಪಾಂಡ್ಯ 64ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT