ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಎಚ್‌ಎಎಲ್ ಪರಾಭವ

Last Updated 5 ಫೆಬ್ರುವರಿ 2011, 16:25 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರಮುಖ ತಂಡಗಳಲ್ಲಿ ಒಂದಾದ ಎಚ್.ಎ. ಎಲ್. ತಂಡದವರು ಬೆಂಗಳೂರು ಕೊಡವ ಸಮಾಜ ಆಶ್ರಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿ ಯಲ್ಲಿ ಅನಿರೀಕ್ಷಿತ ಸೋಲು ಅನುಭ ವಿಸಿ ಟೂರ್ನಿಯಿಂದ ಹೊರಬಿದ್ದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೆಂಟ್ರಲ್ ಎಕ್ಸೈಸ್ ತಂಡದವರು 2-0 ಗೋಲುಗಳಿಂದ ಎಚ್.ಎ.ಎಲ್. ತಂಡದ ಮೇಲೆ ಗೆದ್ದು ಮೂರನೇ ಸುತ್ತು ಪ್ರವೇಶಿಸಿದರು. ವಿಜಯಿ ತಂಡದ ನೀಲೇಶ್ (2) ಗೋಲುಗಳಿಸಿ ತಮ್ಮ ತಂಡದ ಗೆಲುವಿನ ರೂವಾರಿ ಆದರು.

ಇನ್ನೊಂದು ಪಂದ್ಯದಲ್ಲಿ ಸಿ.ಒ.ಇ. ತಂಡ 1-0 ಗೋಲಿನಿಂದ ಭಾರತ ಕ್ರೀಡಾ ಪ್ರಾಧಿಕಾರ ‘ಬಿ’ ಮೇಲೆ ಗೆದ್ದಿತು. ವಿಜಯದ ಗೋಲು ಮನೋಜ್ ಮೂಲಕ ಬಂತು. ನಾಳೆ (ಭಾನುವಾರ) ಮಧ್ಯಾಹ್ನ 4-00ಕ್ಕೆ ಕೆ.ಎಸ್.ಪಿ.-ಆರ್.ಡಬ್ಲ್ಯು.ಎಫ್. ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT