ಮನುಷ್ಯನಾದ ದೇವರು ಶ್ರೀರಾಮ

ಮಂಗಳವಾರ, ಏಪ್ರಿಲ್ 23, 2019
33 °C

ಮನುಷ್ಯನಾದ ದೇವರು ಶ್ರೀರಾಮ

Published:
Updated:

ಚೈತ್ರಮಾಸದ ಶುದ್ಧ ನವಮಿಯಂದು ಶ್ರೀರಾಮ ಜನಿಸಿದ ಎನ್ನುವುದು ಪರಂಪರೆಯಲ್ಲಿರುವ ನಂಬಿಕೆ. ಈ ದಿನವನ್ನು ದೇಶದೆಲ್ಲೆಡೆ ಸಂಭ್ರಮದಿಂದ ‘ಶ್ರೀರಾಮನವಮಿ’ ಎಂದು ಆಚರಿಸಲಾಗುತ್ತದೆ. ಧಾರ್ಮಿಕವಾಗಿಯೂ ಸಾಮಾಜಿಕವಾಗಿಯೂ ಸಾಂಸ್ಕೃತಿಕವಾಗಿಯೂ ಜನರು ಇಂದಿನ ದಿನವನ್ನು ಆಚರಿಸುತ್ತಾರೆ.

ಭಾರತೀಯ ಸಂಸ್ಕೃತಿಯನ್ನು ತುಂಬ ಪ್ರಭಾವಗೊಳಿಸಿರುವ ಮಹಾತತ್ತ್ವಗಳಲ್ಲಿ ಒಂದು ಶ್ರೀರಾಮತತ್ತ್ವ. ಶ್ರೀರಾಮನ ಆದರ್ಶ ಮತ್ತು ಅವನ ಕಥೆಯಾದ ರಾಮಾಯಣ ಕಾವ್ಯ – ಇವೆರಡೂ ನಮ್ಮ ಸಂಸ್ಕೃತಿಯ ಹಲವು ಪದರಗಳನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಪ್ರಭಾವಿಸುತ್ತ ಬಂದಿವೆ.

ಶ್ರೀರಾಮನವಮಿಯ ದಿನ ರಾಮಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಮಧ್ಯಾಹ್ನ ಪಾನಕ, ಕೋಸಂಬರಿ ಮತ್ತು ಮಜ್ಜಿಗೆಗಳ ವಿತರಣೆಯಾಗುತ್ತವೆ. ಈ ವಿತರಣೆ ಕೇವಲ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೆ ಮನೆಗಳಲ್ಲೂ ನಡೆಯುತ್ತದೆ; ಸಂಘ–ಸಂಸ್ಥೆಗಳಿಂದಲೂ ವೈಯಕ್ತಿಕವಾಗಿಯೂ ಹಲವಾರು ಸಾರ್ವಜನಿಕ ಸ್ಥಳಗಳಲ್ಲೂ ನಡೆಯುತ್ತದೆ. ಬಂಡಿಗಳನ್ನು ಕಟ್ಟಿಕೊಂಡು ಊರಿನ ರಸ್ತೆಗಳಲ್ಲಿ ತಿರುಗುತ್ತ ಪಾನಕ–ಕೋಸಂಬರಿಗಳನ್ನು ಹಂಚುವುದು ಅಂದು ಸಾಮಾನ್ಯ ದೃಶ್ಯವೇ ಹೌದು. ವಿಷ್ಣುವಿನ ಅವತಾರವಾದ ಶ್ರೀರಾಮನು ದುಷ್ಟಶಿಕ್ಷಣಕ್ಕಾಗಿ ಅವತರಿಸಿದ ದಿನ ನಮ್ಮೆಲ್ಲರ ಪಾಲಿಗೆ ಹಬ್ಬವೇ ಸರಿ ಎಂಬ ಸಂಕೇತವೇ ಈ ಎಲ್ಲ ಆಚರಣೆಯಲ್ಲಿರುವ ಸಂದೇಶ.

ವಾಲ್ಮೀಕಿ ರಾಮಾಯಣದ ಪಾರಾಯಣವನ್ನು ಶ್ರೀರಾಮನವಮಿ ಯಂದು ಆರಂಭಿಸುವ ಕ್ರಮವೂ ಉಂಟು. ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಪ್ರದಾಯವೂ ಉಂಟು. ಹಲವು ಊರುಗಳಲ್ಲಿ ರಥೋತ್ಸವವೂ ನಡೆಯುವುದುಂಟು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !