ಎಸ್‌ಆರ್‌ಎಂ ಸಂಸ್ಥೆ ಪ್ರಥಮ

ಬುಧವಾರ, ಮಾರ್ಚ್ 27, 2019
26 °C

ಎಸ್‌ಆರ್‌ಎಂ ಸಂಸ್ಥೆ ಪ್ರಥಮ

Published:
Updated:
Prajavani

ಬೆಂಗಳೂರು: ಎಸ್‌ಆರ್‌ಎಂ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿದ್ಯಾರ್ಥಿಗಳು ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌– 2019ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಆರು ಜನ ವಿದ್ಯಾರ್ಥಿಗಳ ತಂಡ, ಸಾಮಾಜಿಕ ಜಾಲತಾಣಗಳ ಮೂಲಕ ಆರೋಗ್ಯಯುತ ಭಾರತವನ್ನು ರೂಪಿಸುವ ಬಗ್ಗೆ ಹೊಸ ಆವಿಷ್ಕಾರವನ್ನು ಮಾಡಿದೆ. ಧರಿಸಬಹುದಾದ ಎಲೆಕ್ಟ್ರಾನಿಕ್‌ ಸಾಧನ (ಆ್ಯಪಲ್‌ ವಾಚ್‌, ಫಿಟ್‌ಬಿಟ್‌ ಚಾರ್ಜ್‌)ಗಳನ್ನು ಬಳಸಿ ಆರೋಗ್ಯದ ಸ್ಥಿತಿಗತಿಗಳನ್ನು ಪತ್ತೆಹಚ್ಚುವ ತಂತ್ರಾಂಶವನ್ನು ರೂಪಿಸಿದೆ.

ಅಲ್ಲದೇ, ಅಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳ ಕ್ಯಾಮೆರಾ ಮೂಲಕ ಎದೆ ಬಡಿತ, ಉಸಿರಾಟದ ಪ್ರಮಾಣ, ಆಮ್ಲಜನಕ ಶುದ್ಧತೆ‌ಯನ್ನು ತಂತ್ರಾಂಶದಿಂದ ಅಳೆಯಬಹುದಾದ ಕಲ್ಪನೆಯನ್ನು ತಂಡ ಪ್ರಸ್ತುತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !