ಅಂಕಿ ಅಂಶ

1,955 ಶೈಕ್ಷಣಿಕ ವಲಯದಲ್ಲಿ ಈ ವರ್ಷ ಪರೀಕ್ಷೆ ಬರೆದ ಮಕ್ಕಳು

1,739 ಉತ್ತೀರ್ಣರಾದವರು

ಹನೂರು: ಸತತ ಮೂರು ಶೈಕ್ಷಣಿಕ ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದ ಹನೂರು ವಲಯದ ಸಾಧನೆಯ ನಾಗಾಲೋಟ ಈ ಬಾರಿಯೂ ಮುಂದುವರಿದಿದೆ.

ಶೇ 88.95ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸುವುದರ ಜೊತೆಗೆ ರಾಜ್ಯಮಟ್ಟದಲ್ಲಿ 11ನೇ ಸ್ಥಾನಕ್ಕೆ ಜಿಗಿದಿದೆ.

ಗ್ರಾಮೀಣ ಪ್ರದೇಶದಿಂದಲೇಆವೃತವಾಗಿರುವಹನೂರು ಶೈಕ್ಷಣಿಕ ವಲಯ2015-16ರಲ್ಲಿ ಶೇ86.62 ಫಲಿತಾಂಶ ಪಡೆದು ರಾಜ್ಯದಲ್ಲಿ 32ನೇ ಸ್ಥಾನ,2016-17ರಲ್ಲಿಶೇ86.88 ಫಲಿತಾಂಶ ದಾಖಲಿಸಿ ರಾಜ್ಯಕ್ಕೆ 8ನೇ ಸ್ಥಾನ,2017-18ರಲ್ಲಿಶೇ88.79 ಫಲಿತಾಂಶದೊಂದಿಗೆ 23ನೇ ಸ್ಥಾನ ಗಳಿಸಿತ್ತು.

7 ಶಾಲೆಗಳಲ್ಲಿ ಶೇ 100 ಫಲಿತಾಂಶ:ಶೈಕ್ಷಣಿಕ ವಲಯದ 40 ಶಾಲೆಗಳ ಪೈಕಿ ಸರ್ಕಾರಿ ಶಾಲೆಗಳಾದ ಗೋಪಿನಾಥಂ ಪ್ರೌಢಶಾಲೆ, ಮಾರಳ್ಳಿ ಶಾಲೆ, ಅನುದಾನಿತ ಶಾಲೆಗಳಾದ ಅಜ್ಜೀಪುರ ಜೆಎಸ್ಎಸ್ಶಾಲೆ, ರಾಮಾಪುರ ಜೆಎಸ್ಎಸ್ ಖಾಸಗಿ ಶಾಲೆಗಳಾದ ಮಾರ್ಟಳ್ಳಿಯ ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ , ಪೊನ್ನಾಚಿಯ ಸಾಲೂರು ಕೃಪಾ ಪೋಷಕ ಶಾಲೆ ಹಾಗೂ ಹೂಗ್ಯಂ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ 100ರಷ್ಟು ಫಲಿತಾಂಶ ಬಂದಿದೆ. ಬಿ.ಎಂ.ಜಿ. ಶಾಲೆ ಬಿಟ್ಟು ಉಳಿದ 32 ಶಾಲೆಗಳು ಸರಾಸರಿ ಶೇ 85 ಫಲಿತಾಂಶ ಗಳಿಸಿವೆ.

‘ಕಳೆದ ವರ್ಷ ಶೇ 95 ಫಲಿತಾಂಶ ಬಂದಿತ್ತು. ಪ್ರಥಮ ಸ್ಥಾನ ಕಾಯ್ದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ಶಾಲೆ ಪ್ರಾರಂಭದಿಂದಲೂ ಮಕ್ಕಳಿಗೆ ವಿಶೇಷ ತರಗತಿ ನಡೆಸುತ್ತಿದ್ದೆವು. ಶಾಲೆಯಲ್ಲಿ ಪ್ರಜ್ವಲ ಪ್ರಕಾಶ ಮತ್ತು ಪ್ರಗತಿ ಎಂಬುದಾಗಿ ಮೂರು ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿನ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದೆವು. ಪ್ರತಿ ಯುನಿಟ್ಗೂ ಘಟಕ ಪರೀಕ್ಷೆಗಳನ್ನು ನಡೆಸಿ ಮೌಲ್ಯಮಾಪನ ಮಾಡುವುದು, 10 ಪಾಠಗಳಲ್ಲಿ ಪರೀಕ್ಷೆಗೆ ಬರುವ ಹಾಗೂ ಅತಿ ಮುಖ್ಯವಾಗಿರುವ ಪಾಠಗಳ ಬಗ್ಗೆ ಮೇಲಿಂದ ಮೇಲೆ ಮನನ ಮಾಡಿಸುವುದು, 5 ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆ ಕೊಟ್ಟು ಪುನರಾವರ್ತನೆ ಮಾಡಿಸುವುದು ಮುಂತಾದ ಕಾರ್ಯಗಳನ್ನು ಪ್ರಾರಂಭದಿಂದಲೇ ಹಮ್ಮಿಕೊಂಡಿದ್ದರಿಂದ ಶೇ 100 ಫಲಿತಾಂಶ ಪಡೆಯಲು ಸಾಧ್ಯವಾಯಿತು’ ಎಂದು ಹೇಳುತ್ತಾರೆ ಗಡಿಗ್ರಾಮದ ಗೋಪಿನಾಥಂ ಶಾಲೆಯ ಮುಖ್ಯಶಿಕ್ಷಕ ಪುಷ್ಪರಾಜು.

‘ವಿಷಯವಾರುಸಂಪನ್ಮೂಲಶಿಕ್ಷಕರನ್ನುಬಳಸಿಕಲಿಕೆಯಲ್ಲಿಹಿಂದುಳಿದಮಕ್ಕಳಬಗ್ಗೆವಿಶೇಷಕಾಳಜಿವಹಿಸಲಾ ಗಿತ್ತು.ಗಣಿತಸೂತ್ರಗಳನ್ನುಬರೆದುಪುನರ್ಮನನಮಾಡಿ ದೀರ್ಘಕಾಲ ನೆನೆಪಿನಲ್ಲಿಟ್ಟುಕೊಳ್ಳುವ ಕೌಶಲವನ್ನು ಬೆಳೆಸುವುದು, ವಿಜ್ಞಾನಪ್ರಾಯೋಗಿಕಪಾಠ,ಇಂಗ್ಲಿಷ್ವ್ಯಾಕರಣಬೋಧನೆ, ನಿರಂತರಹಾಗೂ ಮೌಲ್ಯಮಾಪನದಡಿಯಲ್ಲಿ ಚಟುವಟಿಕೆ ಆಧರಿತ ಕಲಿಕೆಗೆಹೆಚ್ಚಿನಒತ್ತುನೀಡಲಾಗಿತ್ತು. ಶಿಕ್ಷಕರು ಗ್ರಾಮದಲ್ಲೇ ಉಳಿದುಕೊಳ್ಳುತ್ತಿದ್ದುದ್ದರಿಂದ ವಿದ್ಯಾರ್ಥಿಗಳ ಮನೆಗೆ ತೆರಳಿ ಪೋಷಕರಿಗೆ ಮಕ್ಕಳ ಕಲಿಕೆಯ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿತ್ತು. ಶಾಲಾ ಮಟ್ಟದಲ್ಲಿಯೇ ಪ್ರಶ್ನೆಪತ್ರಿಕೆ ತಯಾರಿಸಿ ಪರೀಕ್ಷೆಯನ್ನು ಎದುರಿಸುವ ನೈಪುಣ್ಯ,ಯಾವಪ್ರಶ್ನೆಗಳಿಗೆಹೇಗೆಉತ್ತರ ಬರೆಯುವುದು? ಎಷ್ಟು ಅಂಕದ ಪ್ರಶ್ನೆಗಳಿಗೆ ಯಾವಮಟ್ಟದಲ್ಲಿ ಉತ್ತರಬರೆಯುವುದರಬಗ್ಗೆತರಬೇತಿನೀಡಿದ್ದರಿಂದ ಶೇ 100 ಫಲಿತಾಂಶ ಪಡೆಯಲು ಸಾಧ್ಯವಾಯಿತು’ ಎಂದು ಮಾರಳ್ಳಿ ಸರ್ಕಾರಿ ಶಾಲೆಯ ಮಕ್ಕಳ ಸಾಧನೆಯನ್ನು ಬಿಚ್ಚಿಟ್ಟರು ಮುಖ್ಯಶಿಕ್ಷಕ ನಾಗರಾಜು.

ಅಭಿವೃದ್ಧಿಯಲ್ಲಿ ಹಿಂದುಳಿದಿದ್ದರೂ ಹನೂರು ತಾಲ್ಲೂಕು ಶೈಕ್ಷಣಿಕವಾಗಿ ರಾಜ್ಯದ ಗಮನಸೆಳೆದಿದೆ. ಇಡೀ ಶೈಕ್ಷಣಿಕ ವಲಯ ಗುಡ್ಡಗಾಡು ಪ್ರದೇಶದಿಂದ ಆವೃತವಾಗಿದ್ದರೂ ಇಲ್ಲಿ ಕಲಿಯುವ ಮಕ್ಕಳ ಪ್ರತಿಭೆಗೆ ಸರಿಸಾಟಿಯಿಲ್ಲ ಎಂಬುದು ಮತ್ತೊಮ್ಮ ಸಾಬೀತಾಗಿದೆ.

‘ಶನಿವಾರ, ಭಾನುವಾರ, ರಾತ್ರಿಯೂ ತರಗತಿ’

ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ಅವರು, ‘ನವೆಂಬರ್ನಿಂದ ಪ್ರತಿ ಶನಿವಾರ ಪೂರ್ತಿ ದಿನ ತರಗತಿಗಳನ್ನು ನಡೆಸಲಾಗುತ್ತಿತ್ತು. ಅಗತ್ಯವಿದ್ದರೆ ಭಾನುವಾರವೂ ತರಗತಿ ನಡೆಸಲಾಗುತ್ತಿತ್ತು. ಕ್ಷೇತ್ರ ವ್ಯಾಪ್ತಿಯ ಐದುಸರ್ಕಾರಿಶಾಲೆಗಳಲ್ಲಿ ರಾತ್ರಿತರಗತಿಗಳನ್ನುನಡೆಸಿದ ಪರಿಣಾಮ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.