ಸೋಮವಾರ, ಅಕ್ಟೋಬರ್ 14, 2019
22 °C
ಉಡುಪಿ ಜಿಲ್ಲೆಯ ಸಾಧನೆ: ಬಾಲಕರ ವಿಭಾಗದಲ್ಲಿ ರನ್ನರ್‌ ಅಪ್‌

ಥ್ರೋ ಬಾಲ್‌: ಚಾಮರಾಜನಗರ, ಉಡುಪಿ ಪ್ರಥಮ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಮರಿಯಾಲದ ಮುರುಘರಾಜೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಥ್ರೋಬಾಲ್‌ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಚಾಮರಾಜನಗರ ಹಾಗೂ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲಾ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ.

ಎರಡು ದಿನಗಳ ಪಂದ್ಯಾವಳಿಯಲ್ಲಿ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ತಲಾ 32 ತಂಡಗಳು ಭಾಗವಹಿಸಿದ್ದವು.

ಬಾಲಕರ ವಿಭಾಗದಲ್ಲಿ ಚಾಮರಾಜನಗರ ಹಾಗೂ ಉಡುಪಿ ಜಿಲ್ಲೆಗಳ ತಂಡ ಫೈನಲ್‌ ಪ್ರವೇಶಿಸಿದ್ದವು. ಅಂತಿಮ ಹಣಾಹಣಿಯಲ್ಲಿ ಚಾಮರಾಜನಗರ ತಂಡವು ಉಡುಪಿ ತಂಡವನ್ನು ಮಣಿಸಿತು. 

ಬಾಲಕಿಯರ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದ ಉಡುಪಿ ಹಾಗೂ ಮಂಡ್ಯ ಜಿಲ್ಲೆಗಳ ವಿದ್ಯಾರ್ಥಿನಿಯರ ನಡುವೆ ಟ್ರೋಪಿಗಾಗಿ ಹಣಾಹಣಿ ನಡೆಯಿತು. ಅಂತಿಮವಾಗಿ ಉಡುಪಿ ತಂಡಕ್ಕೆ ಗೆಲುವು ಒಲಿಯಿತು. 

Post Comments (+)