ವಿಶಿಷ್ಟ ಗುರುತಿನ ಸಂಖ್ಯೆ ಪಡೆದ 2,689 ಆಟೊ ರಿಕ್ಷಾ

7
ಅಕ್ರಮ ವಾಹನ ಗುರುತಿಸಲು ಹುಬ್ಬಳ್ಳಿ– ಧಾರವಾಡ ಪೊಲೀಸರ ಯೋಜನೆ

ವಿಶಿಷ್ಟ ಗುರುತಿನ ಸಂಖ್ಯೆ ಪಡೆದ 2,689 ಆಟೊ ರಿಕ್ಷಾ

Published:
Updated:
Deccan Herald

ಹುಬ್ಬಳ್ಳಿ: ಕಾನೂನುಬದ್ಧ ಆಟೊ ರಿಕ್ಷಾಗಳನ್ನು ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಹುಬ್ಬಳ್ಳಿ– ಧಾರವಾಡದ ಎಲ್ಲ ವಾಹನಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಕಾರ್ಯ ಭರದಿಂದ ನಡೆದಿದೆ.

ಆಟೊ ರಿಕ್ಷಾಗಳ ದತ್ತಾಂಶವನ್ನು ಬೆರಳ ತುದಿಯಲ್ಲಿಡುವುದು ಸಹ ಈ ಯೋಜನೆಯ ಇನ್ನೊಂದು ಮುಖ್ಯ ಉದ್ದೇಶ. ಈಗಾಗಲೇ 2,689 ವಾಹನಗಳಿಗೆ ಸಂಖ್ಯೆಯನ್ನು ನೀಡಲಾಗಿದೆ.

ವಿಶಿಷ್ಟ ಸಂಖ್ಯೆಯ ಸ್ಟಿಕ್ಕರ್ ವಾಹನದ ಮೇಲೆ ಅಂಟಿಸಿದ್ದರೆ ಅದು ಕಾನೂನು ಬದ್ಧ ಆಟೊ ರಿಕ್ಷಾ ಎಂದು ಖಚಿತವಾಗುತ್ತದೆ. ಅದ್ದರಿಂದ ತಪಾಸಣೆ ಮಾಡುವ ಅಗತ್ಯ ಇರುವುದಿಲ್ಲ. ಸ್ಟಿಕ್ಕರ್ ಇಲ್ಲದಿದ್ದರೆ ಸಹಜವಾಗಿಯೇ ಅದರ ಬಗ್ಗೆ ಅನುಮಾನ ಬರುತ್ತದೆ, ತಡೆದು ತಪಾಸಣೆ ಮಾಡಲು ಅನುಕೂಲವಾಗುತ್ತದೆ.

ಅಪಘಾತ, ಅಪರಾಧ ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ವಾಹನಗಳ ಮಾಹಿತಿ ಪಡೆಯಲು ಪೊಲೀಸರು ಪರದಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಎಲ್ಲ ದತ್ತಾಂಶವನ್ನು ಸಂಗ್ರಹಿಸಿಡುವುದರಿಂದ ಅಗತ್ಯ ಇರುವ ವಾಹನದ ಮಾಹಿತಿಯನ್ನು ಕೆಲವೇ ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಬಹುದು. ಹುಬ್ಬಳ್ಳಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮಾಲೀಕನ ಮಗನ ಅಪಹರಣದ ಪ್ರಕರಣವನ್ನು ಈ ವಿಶಿಷ್ಟ ಗುರುತಿನ ಸಂಖ್ಯೆ ಸುಳಿವಿನ ಮೇಲೆಯೇ ಭೇದಿಸಿದ್ದನ್ನು ಸ್ಮರಿಸಬಹುದು.

ಪ್ರಕ್ರಿಯೆ ಹೇಗೆ: ಆಟೊ ಮಾಲೀಕರು ತಮ್ಮ ವಾಹನದ ದಾಖಲಾತಿ, ರಹದಾರಿ, ಚಾಲನಾ ಪರವಾನಗಿ ಹಾಗೂ ಸಾಮರ್ಥ್ಯ ಪ್ರಮಾಣ ಪತ್ರವನ್ನು ತಮ್ಮ ವ್ಯಾಪ್ತಿಯ ಸಂಚಾರ ಠಾಣೆಗೆ ನೀಡಬೇಕು. ಅದನ್ನು ಪರಿಶೀಲಿಸುವ ಅಧಿಕಾರಿಗಳು ಎಲ್ಲವೂ ಸಮಗ್ರವಾಗಿದ್ದರೆ ಮಾತ್ರ ಆ ವಾಹನಕ್ಕೆ ಒಂದು ಸಂಖ್ಯೆಯನ್ನು ನೀಡುತ್ತಾರೆ. ಮಾಲೀಕರೇ ನೀಡಿದ ದಾಖಲೆಗಳಲ್ಲಿರುವ ವಾಹನದ ಸಂಪೂರ್ಣ ದತ್ತಾಂಶ ಸಂಗ್ರಹಿಸುತ್ತಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !