ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಜಿಲ್ಲೆ

ADVERTISEMENT

ಕರ್ನಾಟಕ ಒಲಿಂಪಿಕ್ಸ್‌ಗೆ ತುಮಕೂರು ಸಜ್ಜು: ಮುಖ್ಯಮಂತ್ರಿ ಚಾಲನೆ

State Games: ರಾಜ್ಯದ ವಿವಿಧ ಕಡೆಯ ಸ್ಪರ್ಧಿಗಳು, ನಗರದಲ್ಲಿ ಶುಕ್ರವಾರ ಆರಂಭವಾಗುವ ಕರ್ನಾಟಕ ಒಲಿಂಪಿಕ್ಸ್‌ನಲ್ಲಿ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಈ ಕೂಟವು ಇದೇ 22ರವರೆಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಹಾಗೂ ಇತರ ಕಡೆಗಳಲ್ಲಿ ನಡೆಯಲಿದೆ.
Last Updated 15 ಜನವರಿ 2026, 18:59 IST
ಕರ್ನಾಟಕ ಒಲಿಂಪಿಕ್ಸ್‌ಗೆ ತುಮಕೂರು ಸಜ್ಜು: ಮುಖ್ಯಮಂತ್ರಿ ಚಾಲನೆ

ಮಂಗಳೂರು: ಎಂಆರ್‌ಪಿಎಲ್‌ಗೆ ₹1,445 ಕೋಟಿ ಲಾಭ

Mangalore Refinery: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕ ದಲ್ಲಿ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊ ಕೆಮಿಕಲ್‌ ಸಂಸ್ಥೆ (ಎಂಆರ್‌ಪಿಎಲ್‌) ₹1,445 ಕೋಟಿ ನಿವ್ವಳ ಲಾಭ ಗಳಿಸಿದೆ. ಇಲ್ಲಿ ನಡೆದ ಸಂಸ್ಥೆಯ ಆಡಳಿತ ಮಂಡಳಿಯ 272ನೇ ಸಭೆಯಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ.
Last Updated 15 ಜನವರಿ 2026, 18:47 IST
ಮಂಗಳೂರು: ಎಂಆರ್‌ಪಿಎಲ್‌ಗೆ ₹1,445 ಕೋಟಿ ಲಾಭ

ನಂದಿನಿ ಸೇದರಿಂತೆ ಹಲವು ಕಂಪನಿಗಳ ಕಲಬೆರಕೆ ಹಾಲು ತಯಾರಿಕೆ: 8 ಮಂದಿ ಬಂಧನ

Nandini Milk Adulteration: ನಂದಿನಿ ಸೇರಿದಂತೆ ಹಲವು ಬ್ರಾಂಡ್‌ ಕಂಪನಿಗಳ ಕಲಬೆರಕೆ ಹಾಲನ್ನು ತಯಾರಿಸುತ್ತಿದ್ದ ಎಂಟು ಮಂದಿಯನ್ನು ಆಂಡರಸನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಹಾಲಿನ ಪುಡಿ ಮತ್ತು ಪಾಮ್ ಆಯಿಲ್ ಬಳಸಿ ನಕಲಿ ಹಾಲು ತಯಾರಿಸಲಾಗುತ್ತಿತ್ತು.
Last Updated 15 ಜನವರಿ 2026, 18:45 IST
ನಂದಿನಿ ಸೇದರಿಂತೆ ಹಲವು ಕಂಪನಿಗಳ  ಕಲಬೆರಕೆ ಹಾಲು ತಯಾರಿಕೆ: 8 ಮಂದಿ ಬಂಧನ

ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ

KIA Passenger Traffic: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಕಳೆದ ವರ್ಷ (2025) ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 4,38,20,000 ಜನರು ಪ್ರಯಾಣಿಸಿದ್ದಾರೆ. ನವೆಂಬರ್‌ 23ರಂದು ದಾಖಲೆ ಪ್ರಮಾಣದ ಸಂಚಾರ ನಡೆದಿದೆ.
Last Updated 15 ಜನವರಿ 2026, 18:08 IST
ಬೆಂಗಳೂರು ವಿಮಾನ ನಿಲ್ದಾಣ: ಒಂದೇ ವರ್ಷದಲ್ಲಿ 4.38 ಲಕ್ಷ ಜನ ಪ್ರಯಾಣ

ದಲಿತ ಸಿ.ಎಂ ಆಗದಿರುವುದಕ್ಕೆ ನೋವಿದೆ: ಸಚಿವ ಕೆ.ಎಚ್‌. ಮುನಿಯಪ್ಪ

Congress Politics: ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗದಿರುವುದಕ್ಕೆ ನೋವಿದೆ.‌ ಹೈಕಮಾಂಡ್ ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು. ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 15 ಜನವರಿ 2026, 18:04 IST
ದಲಿತ ಸಿ.ಎಂ ಆಗದಿರುವುದಕ್ಕೆ ನೋವಿದೆ: ಸಚಿವ ಕೆ.ಎಚ್‌. ಮುನಿಯಪ್ಪ

ತವರೂರ ಹಾದಿ ಹಿಡಿದವಳಿಗೆ ಯಮನೂರ ತೋರಿದ ಗಂಡ!

Woman Murdered: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮುದೂರು ಗ್ರಾಮದಲ್ಲಿ ಗೌಸಬಿ ಎಂಬುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಅವರ ಪತಿ ಮಕ್ಬುಲ್ ಅಹ್ಮದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಐದು ತಿಂಗಳ ಹಿಂದೆಯಷ್ಟೇ ಇವರ ವಿವಾಹವಾಗಿತ್ತು.
Last Updated 15 ಜನವರಿ 2026, 18:03 IST
ತವರೂರ ಹಾದಿ ಹಿಡಿದವಳಿಗೆ ಯಮನೂರ ತೋರಿದ ಗಂಡ!

ಬೆಂಗಳೂರಿನಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ

Sankranti Festival: ವರ್ಷದ ಪ್ರಥಮ ಹಬ್ಬವಾದ ಸಂಕ್ರಾಂತಿಯನ್ನು ನಗರದೆಲ್ಲೆಡೆ ಸಂಭ್ರಮ ಸಡಗರದಿಂದ ಗುರುವಾರ ಆಚರಿಸಲಾಯಿತು. ಹಬ್ಬದ ಅಂಗವಾಗಿ ಮನೆ ಮನೆಗಳೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಚಿಣ್ಣರು, ಮಹಿಳೆಯರು ಎಳ್ಳು ಬೆಲ್ಲ ಹಂಚಿ ಸಂಭ್ರಮಿಸಿದರು.
Last Updated 15 ಜನವರಿ 2026, 17:53 IST
ಬೆಂಗಳೂರಿನಾದ್ಯಂತ ಸಡಗರದ ಸಂಕ್ರಾಂತಿ ಆಚರಣೆ
ADVERTISEMENT

ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ

Town Planning Office: ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿಯನ್ನು ತಾತ್ಕಾಲಿಕವಾಗಿ ಎಚ್‌ಎಸ್‌ಆರ್‌ ಬಡಾವಣೆಯ ಬಿಡಿಎ ವಾಣಿಜ್ಯ ಸಂಕೀರ್ಣದ 2ನೇ ಮಹಡಿಗೆ ಸ್ಥಳಾಂತರಿಸಲಾಗಿದೆ.
Last Updated 15 ಜನವರಿ 2026, 17:53 IST
ಬೊಮ್ಮನಹಳ್ಳಿ ವಲಯ-2 ನಗರ ಯೋಜನೆ ವಿಭಾಗದ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ

ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

North Karnataka Tragedy: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಗಲಕೋಟೆ, ಹಾವೇರಿ, ದಾಂಡೇಲಿ, ಮಾನ್ವಿ ಮತ್ತು ಶಹಾಬಾದ್‌ನಲ್ಲಿ ಈ ದುರ್ಘಟನೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 17:51 IST
ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

ತಾಳಿಕೋಟೆ: ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ

Annadaneshwara Hiremath: ತಾಲ್ಲೂಕಿನ ಹಿರೂರು ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ 35ನೇ ಪೀಠಾಧಿಪತಿ ಶಾಂತವೀರ ಶಿವಯೋಗಿ ಶಿವಾಚಾರ್ಯರು ಗುರುವಾರ ನಿಧನರಾದರು. ಶ್ರೀಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.
Last Updated 15 ಜನವರಿ 2026, 17:50 IST
ತಾಳಿಕೋಟೆ:  ಶಾಂತವೀರ ಶಿವಯೋಗಿ ಶಿವಾಚಾರ್ಯರ ನಿಧನ
ADVERTISEMENT
ADVERTISEMENT
ADVERTISEMENT