ತುಮಕೂರು: ತಾಲ್ಲೂಕಿನ ಬೆಳ್ಳಾವಿ ಕಾರದೇಶ್ವರ ಮಠದಿಂದ ಬುಧವಾರ ಬೆಳಿಗ್ಗೆ ನಾಪತ್ತೆಯಾಗಿದ್ದ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಮಧ್ಯಾಹ್ನದ ವೇಳೆಗೆ ಸಿದ್ಧಗಂಗಾ ಮಠದಲ್ಲಿ ಪ್ರತ್ಯಕ್ಷರಾಗಿದ್ದಾರೆ.

‘ಎಲ್ಲಿಗೆ ಹೋಗುತ್ತಿದ್ದೇನೆ’ ಎಂಬ ವಿಚಾರವನ್ನು ಮಠದವರು ಹಾಗೂ ಭಕ್ತರಿಗೆ ತಿಳಿಸದೆ ಸ್ವಾಮೀಜಿ ಕಾಣೆಯಾಗಿದ್ದು ಕೆಲ ಸಮಯ ಆತಂಕ ಮೂಡಿಸಿತ್ತು. ಸಂಚರಿಸಲು ವಾಹನವನ್ನೂ ತೆಗೆದುಕೊಂಡು ಹೋಗದಿರುವುದು, ಯಾರೊಬ್ಬರಿಗೂ ವಿಚಾರ ತಿಳಿಸದಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಮಧ್ಯಾಹ್ನದ ವೇಳೆಗೆ ಸಿದ್ಧಗಂಗಾ ಮಠದಲ್ಲಿ ಪ್ರತ್ಯಕ್ಷರಾದ ನಂತರ ಭಕ್ತರಲ್ಲಿ ಮೂಡಿದ್ದ ಆತಂಕ ದೂರವಾಯಿತು.

ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಸ್ವಾಮೀಜಿ ಮಠ ತೊರೆದಿದ್ದರು. ಮಠದಿಂದ ಕಾಲುನಡಿಗೆಯಲ್ಲಿ ಬಂದು ಸಿದ್ಧಗಂಗಾ ಮಠ ಸೇರಿದ್ದರು. ಸುಮಾರು 15 ಕಿ.ಮೀ ನಡೆದುಕೊಂಡೇ ಬಂದಿದ್ದರು. ಮಠದ ಬಳಿ ಫ್ಲೆಕ್ಸ್ ನಿರ್ಮಿಸುವ ವಿಚಾರಕ್ಕೆ ನಡೆದ ಗಲಾಟೆಯಿಂದ ಮನನೊಂದು ಮಠ ತೊರೆದು ಬಂದಿದ್ದಾರೆ ಎನ್ನಲಾಗಿದೆ.

ಬೆಳ್ಳಾವಿ ಜಾತ್ರೆ ಸಮಯದಲ್ಲಿ ಮಠದ ಆವರಣ ಗೋಡೆಗೆ ಹೊಂದಿಕೊಂಡಂತೆ ಕಳೆದ ಭಾನುವಾರ ರಾತ್ರಿ ಕೆಲವರು ಫ್ಲೆಕ್ಸ್ ನಿರ್ಮಿಸಿದ್ದರು. ಫ್ಲೆಕ್ಸ್ನ ಕೆಲ ಭಾಗ ಹರಿದ ಬಗ್ಗೆ ಸ್ವಾಮೀಜಿ ಬಳಿ ಬಂದು ಪ್ರಶ್ನಿಸಿದ್ದರು. ಮಠದಲ್ಲಿರುವ ಸಿ.ಸಿ ಟಿ.ವಿ ಮಾಹಿತಿ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ವಾಮೀಜಿ ಒಪ್ಪಿರಲಿಲ್ಲ. ಒತ್ತಡ ಹೆಚ್ಚಾಗಿದ್ದರಿಂದ ಸಿ.ಸಿ ಟಿ.ವಿ ತೋರಿಸಿದ್ದರು. ಅದರಲ್ಲೂ ಯಾರು ಫ್ಲೆಕ್ಸ್ ಕಿತ್ತಿದ್ದಾರೆ ಎಂಬುದು ಗೊತ್ತಾಗಿರಲಿಲ್ಲ. ಸೋಮವಾರ ರಥೋತ್ಸವ ನೆರವೇರಿತು. ಮಂಗಳವಾರ ಮತ್ತೆ ಕೆಲವರು ಸ್ವಾಮೀಜಿ ಬಳಿ ಗಲಾಟೆ ಮಾಡಿದ್ದಾರೆ. ಇದರಿಂದ ಮನನೊಂದು ಮಠದಿಂದ ಹೊರಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ಧಗಂಗಾ ಮಠದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಾರದ ವೀರಬಸವ ಸ್ವಾಮೀಜಿ, ‘ಫ್ಲೆಕ್ಸ್ ವಿಚಾರಕ್ಕೆ ಗಲಾಟೆಯಾಗಿರುವುದು ಗೊತ್ತಿಲ್ಲ. ಆ ವಿಚಾರಕ್ಕೆ ಮಠ ಬಿಟ್ಟು ಬಂದಿಲ್ಲ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಠಕ್ಕೆ ಆಹ್ವಾನಿಸುತ್ತಲೇ ಇದ್ದರು. ಬಂದಿರಲಿಲ್ಲ, ಈಗ ಬಂದಿದ್ದೇನೆ. ಸಿದ್ಧಲಿಂಗ ಸ್ವಾಮೀಜಿ ಹೇಳುವವರೆಗೂ ಮಠದಲ್ಲಿ ಇರುತ್ತೇನೆ’ ಎಂದು ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.