ರಾಯಚೂರು: ‘ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರೇ ಈ ದೇಶದ ರಾಯಭಾರಿಗಳು’ ಎಂದು ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎನ್ಎಸ್ಎಸ್ ಕೋಶದ ಅಧಿಕಾರಿ ಪ್ರತಾಪ ಲಿಂಗಯ್ಯ ಬಣ್ಣಿಸಿದರು.

ರಾಷ್ಟ್ರೀಯ ಸೇವಾ ಯೋಜನಾ ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ, ಪ್ರಾದೇಶಿಕ ನಿರ್ದೇಶನಾಲಯ, ಕೇಂದ್ರದ ಎನ್ಎಸ್ಎಸ್ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಅಡಿಯಲ್ಲಿ ವಿವಿಯ ಸಭಾಂಗಣದಲ್ಲಿ ನಡೆದ 7 ದಿನಗಳ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

‘ದೇಶವು ವೈವಿಧ್ಯತೆಯಿಂದ ಕೂಡಿರುವುದರಿಂದ ಎನ್ಎಸ್ಎಸ್ ಶಿಬಿರದಲ್ಲಿ ನಾವು ಭಾಷೆ, ಆಹಾರ, ಸಂಪ್ರದಾಯ, ಸಂಸ್ಕೃತಿಯ ವಿನಿಮಯವಾಗುತ್ತದೆ. ಇದರಿಂದ ಏಕತೆಯ ಭಾವನೆ. ಸಾಮಾಜಿಕ ಜವಾಬ್ದಾರಿಯ ಅರಿವಾಗುತ್ತದೆ. ಎನ್ಎಸ್ಎಸ್ ವಿಶೇಷ ಶಿಬಿರಗಳ ವಿದ್ಯಾರ್ಥಿಗಳಲ್ಲಿ ಶ್ರಮದಾನ ಮತ್ತು ನಾಯಕತ್ವದ ಗುಣಗಳನ್ನು ಪ್ರೋತ್ಸಾಹಿಸುತ್ತವೆ’ ಎಂದು ಹೇಳಿದರು.

‘ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಯುವಜನೋತ್ಸವಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಪ್ರಾರಂಭದ 1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ 40 ಸಾವಿರ ಸ್ವಯಂ ಸೇವಕರಿದ್ದರು, ಪ್ರಸ್ತುತ 45 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಈ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು, ಚಟುವಟಿಕೆಗಳು, ಶಿಸ್ತುಬದ್ಧತೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಭಾರತ ಒಂದು ವೈವಿಧ್ಯತೆಯಿಂದ ಕೂಡಿರುವುದೇ ಇದಕ್ಕೆ ಕಾರಣವಾಗಿದೆ’ ಎಂದು ತಿಳಿಸಿದರು.

‘ಭಾರತೀಯ ಸಂವಿಧಾನವು 22 ಭಾಷೆಗಳನ್ನು ಗುರುತಿಸಿದರೂ ಅದರಲ್ಲಿ ಹಲವಾರು ಉಪಭಾಷೆಗಳಿವೆ. ಸಮಾಜದಲ್ಲಿ ಜಾತಿಯತೆ, ಕೋಮುವಾದ ಹೋಗಲಾಡಿಸಲು ಶಿಬಿರದಲ್ಲಿ 150 ಜವಾಬ್ದಾರಿಯುತ ಸ್ವಯಂಸೇವಕರನ್ನು ಆಯ್ಕೆಮಾಡಲಾಗಿದೆ‘ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಎ.ಚನ್ನಪ್ಪ ಮಾತನಾಡಿ, ‘ಶಿಬಿರಾರ್ಥಿಗಳು ಏಳು ದಿನಗಳವರೆಗೆ ವಿಶ್ವವಿದ್ಯಾಲಯದ ಆಟದ ಮೈದಾನ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯದ ಯುವ ಅಧಿಕಾರಿ ಪಿ.ಎನ್.ಸಂತೋಷ ಮಾತನಾಡಿ, ‘ಕರ್ನಾಟಕ ಸರ್ಕಾರ ದೇಶದಲ್ಲಿಯೆ ಅತಿ ಹೆಚ್ಚು 10 ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ಆಯೋಜಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಬಣ್ಣಿಸಿದರು.

ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಸುಯಮೀಂದ್ರ ಕುಲಕರ್ಣಿ, ಡೀನ್ ಮತ್ತು ಐಕ್ಯೂಎಸಿ ನಿರ್ದೇಶಕರು ಪ್ರೊ.ಪಿ.ಭಾಸ್ಕರ್, ಬೆಂಗಳೂರಿನ ಎನ್.ಎಸ್.ಎಸ್ ಪ್ರಾದೇಶಿಕ ನಿರ್ದೇಶಕ ಗಿರಿಧರ್ ಉಪಾಧ್ಯಾಯ, ನಿವೃತ್ತ ಪ್ರಾಚಾರ್ಯ ಶ್ರೀನಿವಾಸ ರಾಯಚೂರಕರ್ ಉಪಸ್ಥಿತರಿದ್ದರು.

ಕರ್ನಾಟಕದ 16 ವಿಶ್ವವಿದ್ಯಾಲಯಗಳು ಮತ್ತು ಇತರೆ ಐದು ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳನಾಡಿನ ವಿಶ್ವವಿದ್ಯಾಲಯಗಳ ಸ್ವಯಂಸೇವಕರು ಭಾಗವಹಿಸಿದ್ದರು.

ಎನ್.ಎಸ್.ಎಸ್ ಸಹಾಯಕ ನಿರ್ದೇಶಕಿ ಪದ್ಮಜಾ ದೇಸಾಯಿ, ಅರ್ಥಶಾಸ್ತ್ರ ವಿಭಾಗದ ಶಿವರಾಜ್ ಹರವಿ, ವಾಲ್ಮೀಕಿ ವಿವಿಯ ವಿವಿಧ ವಿಭಾಗಗಳ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಅನುಭವ ಹಂಚಿಕೆ

ಎನ್.ಎಸ್.ಎಸ್ ಶಿಬಿರದ ಅಂತಿಮ ದಿನದಂದು ಅತಿಥಿಗಳ ಉಪಸ್ಥಿತಿಯಲ್ಲಿ ಶಿಬಿರಾರ್ಥಿಗಳ ಅನುಭವ ಹಂಚಿಕೆ ಮತ್ತು ಗೌರವ ಸಮರ್ಪಣೆ ನಡೆಯಿತು. ಪ್ರತಿದಿನ ಸಂಜೆ ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವು ಹಮ್ಮಿಕೊಳ್ಳಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಒಂದು ವಾರದ ವರದಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಎನ್.ಎಸ್.ಎಸ್ ಸಂಯೋಜನಾಧಿಕಾರಿ ಜಿ.ಎಸ್.ಬಿರಾದಾರ ವರದಿ ವಾಚನ ಮಾಡಿದರು, ಕೇರಳದ ಶಿಬಿರಾರ್ಥಿ ಮೂರ್ಶಿದ ಪ್ರಾರ್ಥಿಸಿದರು. ಲತಾ.ಎಂ.ಎಸ್. ಸ್ವಾಗತಿಸಿದರು. ಅನಿಲ್ ಅಪ್ರಾಳ್ ಹಾಗೂ ಬಜಾರಪ್ಪ ನಿರೂಪಿಸಿದರು. ನಾಗವೇಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.