ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆದ ಮಕ್ಕಳ ಸಹಾಯವಾಣಿ ತಂಡ

Last Updated 30 ಮಾರ್ಚ್ 2019, 15:20 IST
ಅಕ್ಷರ ಗಾತ್ರ

ಚಾಮರಾಜನಗರ: ಮಕ್ಕಳ ಸಹಾಯವಾಣಿ ತಂಡ ಭಾನುವಾರ (ಮಾರ್ಚ್‌ 31) ನಡೆಯಬೇಕಿದ್ದ 17 ವರ್ಷದ ಬಾಲಕಿಯ ವಿವಾಹವನ್ನು ಶನಿವಾರ ತಡೆಯುವಲ್ಲಿ ಯಶಸ್ವಿಯಾಗಿದೆ.

ತಾಲ್ಲೂಕಿನ ಗ್ರಾಮವೊಂದರಲ್ಲಿ ತಮಿಳುನಾಡಿನ ತಾಳವಾಡಿಯ ಬಸವೇಗೌಡರ ಮಗ ರಘು (26) ಎಂಬುವನೊಂದಿಗೆ ಇಂದು (ಮಾರ್ಚ್‌ 31) ಗಾಜನೂರಿನಲ್ಲಿ ವಿವಾಹ ನಿಶ್ಚಯವಾಗಿತ್ತು. ವಿವಾಹಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಮಕ್ಕಳ ಸಹಾಯವಾಣಿಗೆ ಶನಿವಾರ ಬೆಳಿಗ್ಗೆ ಕರೆ ಹೋದ ಬಳಿಕ ಸಹಾಯವಾಣಿಯ ತಂಡ ವಿವಾಹ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನೊಳಗೊಂಡುಗ್ರಾಮಕ್ಕೆ ತೆರಳಿದರು.

ಗ್ರಾಮದಲ್ಲಿ ಮನೆಯ ಎದುರು ಚಪ್ಪರ ಹಾಕಲಾಗಿತ್ತು. ವಿವಾಹಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ನಂತರ ತಂಡ ಬಾಲ್ಯ ವಿವಾಹ ಕುರಿತು ಮನವರಿಕೆ ಮಾಡಿಕೊಟ್ಟರು. ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಮನವೊಲಿಸಿ ಬಾಲಕಿಯನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಒಪ್ಪಿಸಿ ವಿವಾಹ ನಿಲ್ಲಿಸುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT