ಗುರುವಾರ , ಆಗಸ್ಟ್ 22, 2019
27 °C

ಮೋಜಿಗಾಗಿ ಸುಲಿಗೆ: ಮೂವರು ಬಲೆಗೆ

Published:
Updated:
Prajavani

ಬೆಂಗಳೂರು: ಮೋಜಿಗಾಗಿ ಹಣ ಸಂಪಾದಿಸುವ ಉದ್ದೇಶದಿಂದ ಒಬ್ಬಂಟಿಯಾಗಿ ಓಡಾಡುವವರನ್ನು ಗುರಿಯಾಗಿಸಿ, ಬೆದರಿಸಿ ಸುಲಿಗೆ ಮಾಡುತ್ತಿದ್ದ ಮೂವರ ತಂಡವನ್ನು ಆರ್‌.ಟಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ. ನಗರದ ಮೊಹಮ್ಮದ್‌ ಸಲಾಹ್ (20), ಗಂಗಾನಗರದ ಮೊಹಮ್ಮದ್‌ ಶೇಖ್ (20) ಮತ್ತು ಶೇಖ್ ಸಲ್ಮಾನ್‌ ಅಲಿಯಾಸ್‌ ಸಲ್ಮಾನ್‌ (20) ಬಂಧಿತರು. ಬಂಧಿತರಿಂದ ₹ 1 ಲಕ್ಷ ಮೌಲ್ಯದ ಸ್ಕೂಟರ್‌ಗಳು, ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಆರ್‌.ಟಿ. ನಗರದ ತರಳಬಾಳು ರಸ್ತೆಯಲ್ಲಿ ಊಬರ್‌ ಈಟ್ಸ್‌ ಕಂಪನಿಯ ಡೆಲಿವರಿ ಬಾಯ್‌ ಸಚಿನ್‌ ಎಂಬಾತ ಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಚಾಕು ತೋರಿಸಿ, ಬೆದರಿಸಿ ಹಲ್ಲೆ ನಡೆಸಿ ಮೊಬೈಲ್‌ ಮತ್ತು ಸ್ಕೂಟರ್‌ ಕಸಿದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಆರ್‌.ಟಿ. ನಗರ ಇನ್‌ಸ್ಪೆಕ್ಟರ್‌ ಮಿಥುನ್‌ ಶಿಲ್ಪಿ ಮತ್ತು ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ.

ಎಸ್‌ಎಸ್‌ಎಲ್‌ಸಿವರೆಗೆ ಕಲಿತಿರುವ ಆರೋಪಿಗಳು, ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದರು.

Post Comments (+)