ಸೋಮವಾರ, ಆಗಸ್ಟ್ 26, 2019
20 °C

ಶನೀಶ್ವರ ಸ್ವಾಮಿ ದೇಗುಲ ವಾರ್ಷಿಕೋತ್ಸವ

Published:
Updated:
Prajavani

ದಾಬಸ್ ಪೇಟೆ: ಹೊಸಪಾಳ್ಯದ ಶನೀಶ್ವರ ಸ್ವಾಮಿ ದೇಗುಲದ 77ನೇ ವಾರ್ಷಿಕೋತ್ಸವವು ಶ್ರಾವಣ ಮಾಸದ ಮೊದಲ ಶನಿವಾರ ವೈಭವದಿಂದ ನೆರವೇರಿತು.

ದೇವಾಲಯವನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ಸಂಜೆಯಿಂದ ಹೋಮ–ಹವನ ನಡೆದವು. ಸುತ್ತ–ಮುತ್ತಲಿನ ಗ್ರಾಮಗಳ ಸಾವಿರಾರು ಜನ ಭೇಟಿ ನೀಡಿ, ಶನೀಶ್ವರಗೆ ಪೂಜೆ ಸಲ್ಲಿಸಿದರು. 

’ದ್ವೇಷ, ಅಸೂಯೆ, ಮನಸ್ತಾಪ ಗಳನ್ನು ಮರೆತು ಪ್ರೀತಿ ಹಾಗೂ ಭ್ರಾತೃತ್ವದಿಂದ ಬದುಕುವುದನ್ನು ಕಲಿಯಬೇಕು. ದೇವರನ್ನು ಯಾರು ನೋಡಲಾಗದು. ಆದರೆ ನಮ್ಮ ಸಜ್ಜನಿಕೆ, ಸ್ನೇಹದ ವ್ಯಕ್ತಿತ್ವದಿಂದ ಎಲ್ಲೆಡೆಯೂ ದೇವರನ್ನು ಕಾಣಬಹುದು’ ಎಂದರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. ಅರ್ಚಕ ಗವೀರಂಗಪ್ಪ ಮಾತನಾಡಿದರು.

Post Comments (+)