ಎಂಜಿನಿಯರ್– ಸರ್ಕಾರಿ ನೌಕರನೇ ಬೇಕೆಂಬ ಮನಸ್ಥಿತಿಯಿಂದ ಹೊರಬನ್ನಿ; ಪ್ರಹ್ಲಾದ ಜೋಶಿ

7

ಎಂಜಿನಿಯರ್– ಸರ್ಕಾರಿ ನೌಕರನೇ ಬೇಕೆಂಬ ಮನಸ್ಥಿತಿಯಿಂದ ಹೊರಬನ್ನಿ; ಪ್ರಹ್ಲಾದ ಜೋಶಿ

Published:
Updated:
Deccan Herald

ಹುಬ್ಬಳ್ಳಿ: ಸರ್ಕಾರಿ ಉದ್ಯೋಗಿ, ಸಾಫ್ಟ್‌ವೇರ್ ಎಂಜಿನಿಯರ್ ಬೇಕು ಎಂಬ ಮನಸ್ಥಿತಿಯಿಂದ ಬ್ರಾಹ್ಮಣ ಸಮುದಾಯದ ವಧು– ವರರು ಹೊರ ಬರಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡ ಜಿಲ್ಲಾ ವಿವಿಧ ಬ್ರಾಹ್ಮನ ಸಂಘಟನೆಗಳು. ಬ್ರಾಹ್ಮಣ ಸ್ವಯಂ ಸೇವಕ ಸಂಘ ಮೈಸೂರು, ಸಪ್ತಪದಿ ಫೌಂಡೇಷನ್ ಹಾಗು ಮಂಗಳ ಸೂತ್ರ ಪತ್ರಿಕೆಯ ಸಂಯುಕ್ತ ಅಶ್ರಯದಲ್ಲಿ ನಗರದಲ್ಲಿ ಭಾನುವಾರ ಎರ್ಪಡಿಸಿದ್ದ ರಾಜ್ಯಮಟ್ಟದ 22ನೇ ಬ್ರಾಹ್ಮಣ ವಧು– ವರಾನ್ವೇಷಣಾ ಸಮಾವೇಶದಲ್ಲಿ ಮಾತನಾಡಿದರು.

 ಈ ಸಮಾಜದಲ್ಲಿ ವಧು, ವರರ ಸಮಸ್ಯೆ ಇದೆ. ವಿವಾಹ ವಿಚ್ಛೇದನದ ಪ್ರಕರಣಗಳೂ ಹೆಚ್ಚಾಗುತ್ತಿವೆ. ಸುಖ ಎಂಬುದು ದುಡ್ಡು ಹಾಗೂ ಅಧಿಕಾರದಿಂದ ಸಿಗುವುದಿಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಇರುವುದರಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸುವುದರಲ್ಲಿ ಸುಖ ಇದೆ. ಜೀವನ ಒಳ್ಳೆಯ ರೀತಿ ಸಾಗಿಸಬೇಕು ಎಂಬ ವಿಷಯವೇ ಮುಖ್ಯವಾಗಬೇಕು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮಿಕಾಂತ್ ಮಾತನಾಡಿ, ತ್ರಿಮತಸ್ಥರು ಭೇದ–ಭಾವವನ್ನು ಬಿಟ್ಟು ಸಂಬಂಧ ಬೆಳೆಸಲು ಮುಂದಾಗಬೇಕು. ಅಂತಹ ಪ್ರವೃತ್ತಿ ಹೆಚ್ಚಾದರೆ ಮಾತ್ರ ಬ್ರಾಹ್ಮಣಿಕೆ ನಮ್ಮಲ್ಲಿಯೇ ಉಳಿಯುತ್ತದೆ. ನಮ್ಮಲ್ಲಿ ಕಟ್ಟುಪಾಡು ಮುಂದುವರೆದರೆ ಯುವಕ– ಯುವತಿಯರು ಬೇರೆ ಸಮಾಜದವರತ್ತ ಆಕರ್ಷಿತರಾಗುತ್ತಾರೆ ಎಂದರು.

ವೈದಿಕ ಸಂಪ್ರದಾಯ, ತ್ರಿಮತಸ್ಥ ಪರಂಪರೆಯನ್ನು ಉಳಿಸುವ ದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳು ಟಿ.ವಿ, ಮೊಬೈಲ್ ಬಳಕೆಯಿಂದ ಹಾಳಾಗುತ್ತಿದ್ದಾರೆ. ಅವರಲ್ಲಿ ಸಂಸ್ಕಾರ ಬೆಳೆಸುವ ಕೆಲಸವನ್ನು ತಂದೆ– ತಾಯಿ ಮಾಡಬೇಕು. ಯುವಕ ಯುವತಿಯರು ಸಹ ಮದುವೆಯಾದರೆ ಬ್ರಾಹ್ಮಣರನ್ನೇ ಎಂದು ಸಂಕಲ್ಪ ಮಾಡಬೇಕು ಎಂದು ನಾರಾಯಣಚಾರ್ಯ ದೂಳಖೇಡ ಹೇಳಿದರು.

200 ಯುವಕರು ಹಾಗೂ 150 ಮಂದಿ ಯುವತಿಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಮೇಯರ್ ಸುಧೀರ್ ಸರಾಫ, ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಂ.ಬಿ. ನಾತು, ಸಮಾಜ ಸಂಘದ ಅರವಿಂದ ಬಿ ಕುರ್ತುಕೋಡಿ, ಬ್ರಾಹ್ಮಣ ಸ್ವಯಂ ಸೇವಕ ಸಂಘದ ಅಧ್ಯಕ್ಷ ಮಂಗಳಸೂತ್ರ ಎನ್ ಶ್ರೀನಿವಾಸ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !