ಬುಧವಾರ, ನವೆಂಬರ್ 20, 2019
25 °C

ಜಲಮಂಡಳಿಯಿಂದ ಫೋನ್‌ ಇನ್‌ ನಾಳೆ

Published:
Updated:
Prajavani

ಬೆಂಗಳೂರು: ಜಲಮಂಡಳಿಯು ಇದೇ 19ರಂದು (ಶನಿವಾರ) ನೇರ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಬೆಳಿಗ್ಗೆ 9.30ರಿಂದ 10.30ರವರೆಗೆ ಸಮಸ್ಯೆಗಳನ್ನು ಆಲಿಸಲಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಮತ್ತು ಕೊಳವೆಗಳಿಂದ ತ್ಯಾಜ್ಯ ನೀರು ಬರುತ್ತಿರುವ ಬಗ್ಗೆ, ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ಹೇಳಬಹುದು. 

ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್. ಸಂಖ್ಯೆ ತಿಳಿಸಿ ದೂರು ನೀಡಬಹುದು. ದೂರವಾಣಿ ಸಂಖ್ಯೆ: 080-22945119.

ಪ್ರತಿಕ್ರಿಯಿಸಿ (+)