ಶುಕ್ರವಾರ, ಏಪ್ರಿಲ್ 16, 2021
22 °C

‘ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿಗರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿ ನಗರ: ‘ವಿದೇಶಿಗರು ಭಾರತ ಸಂಸ್ಕೃತಿಗೆ ಮಾರುಹೋಗಿದ್ದು, ನಮ್ಮ ಸಂಸ್ಕೃತಿ, ಪರಂಪರೆ, ಆಚರಣೆ, ಧ್ಯಾನ, ಪ್ರಾಣಾಯಾಮ, ಯೋಗಗಳಿಗೆ ಭಾರತವನ್ನು ಆದರ್ಶವಾಗಿಟ್ಟುಕೊಂಡಿ ದ್ದಾರೆ’ ಎಂದು ಧಾರ್ಮಿಕ ಚಿಂತಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಹೇಳಿದರು.

ಹೇರೋಹಳ್ಳಿ ಸಮೀಪದ ಸಿಂಡಿ ಕೇಟ್ ಬ್ಯಾಂಕ್ ಕಾಲೊನಿಯ ಓಂ ಸೇವಾ ಕೇಂದ್ರದಲ್ಲಿ ಯೋಗ ಗುರು ಡಾ.ಸಿ.ಎನ್.ಕೃಷ್ಣ ಅವರಿಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೇದವ್ಯಾಸರು ಜಗತ್ತಿಗೆ ಜ್ಞಾನ ಕೊಟ್ಟವರು. ನಮ್ಮೆಲ್ಲರಿಗೂ ಸುಜ್ಞಾನವನ್ನು ಧಾರೆ ಎರೆ ದಿದ್ದರಿಂದ ನಾವೆಲ್ಲರೂ ಪ್ರಜ್ಞಾವಂತರಾಗಿ ಜೀವಿಸುತ್ತಿದ್ದೇವೆ’ ಎಂದರು.

ಯೋಗ ಗುರು ಡಾ.ಸಿ.ಎನ್.ಕೃಷ್ಣ, ‘ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಜನರಿಗೆ ಕೈಲಾದ ಸಹಾಯಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು. ವೃತ್ತ ಮುಖ್ಯಶಿಕ್ಷಕ ರಾಜ್‍ಗೋಪಾಲ್ ಮಾತನಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು