ತಾಂತ್ರಿಕ ಉತ್ಪನ್ನಗಳ ಪ್ರದರ್ಶನ: ಕೆಎಲ್‌ಇ ‘ಪ್ಯೂಪಾ 2018’ ನಾಳೆಯಿಂದ

7
414 ತಂಡಗಳು ಭಾಗವಹಿಸಲಿವೆ

ತಾಂತ್ರಿಕ ಉತ್ಪನ್ನಗಳ ಪ್ರದರ್ಶನ: ಕೆಎಲ್‌ಇ ‘ಪ್ಯೂಪಾ 2018’ ನಾಳೆಯಿಂದ

Published:
Updated:

ಹುಬ್ಬಳ್ಳಿ: ಕಾಲೇಜು ವಿದ್ಯಾರ್ಥಿಗಳ ಮಾದರಿ ತಾಂತ್ರಿಕ ಉತ್ಪನ್ನ ಪ್ರದರ್ಶನ ‘ಪ್ಯೂಪಾ – 2018’ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿಎಲ್‌ಐಟಿಇ ಕಟ್ಟಡದಲ್ಲಿ ಶನಿವಾರ (ಅ.13) ನಡೆಯಲಿದೆ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಎಲ್‌ಇ ತಂತ್ರಜ್ಞಾನ, ನಾವೀನ್ಯತೆ ಹಾಗೂ ಉದ್ಯಮ ಕೇಂದ್ರದ (ಸಿಟಿಐಇ) ನಿರ್ದೇಶಕ ಡಾ. ನಿತಿನ್ ಕುಲಕರ್ಣಿ, ಇದು ಪ್ಯೂಪಾದ ಆರನೇ ಆವೃತ್ತಿಯಾಗಿದ್ದು, ಉತ್ತರ ಕರ್ನಾಟಕ ಜಿಲ್ಲೆಗಳ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳ ಒಟ್ಟು 414 ತಂಡಗಳು ಇದರಲ್ಲಿ ಭಾಗವಹಿಸುತ್ತಿವೆ. ಹುಬ್ಬಳ್ಳಿ– ಧಾರವಾಡದ ಕೆಲವು ಶಾಲೆಗಳ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ. ನವೀನ ಚಿಂತನೆಗಳ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಲಿದೆ ಎಂದರು.

ತಾಂತ್ರಿಕ ಉತ್ಪನ್ನಗಳ ಪ್ರದರ್ಶನ ಕೇವಲ ಸಾಂಕೇತಿಕವಾಗಬಾರದು, ಗ್ರಾಹಕರ ಅಗತ್ಯಗಳನ್ನು ಸಹ ಅದು ಪೂರೈಸುವಂತಿರಬೇಕು. ಮಾರುಕಟ್ಟೆಯಲ್ಲಿಯೂ ಯಶಸ್ಸು ಕಾಣಬೇಕು ಎಂಬ ಉದ್ದೇಶದಿಂದ ಈ ಬಾರಿ ಇನ್ನೊಂದು ಹೆಜ್ಜೆ ಮುಂದಿಡಲಾಗಿದೆ. ಇಲ್ಲಿ ಪ್ರದರ್ಶನಗೊಳ್ಳುವ ಉತ್ಪನ್ನಗಳು, ಮಾರುಕಟ್ಟೆಯ ವಾಸ್ತವಗಳಿಗೂ ಹತ್ತಿರವಾಗಿರಲಿವೆ. ಉದ್ಯಮಿಗಳಿಗೂ ಈ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿದೆ. ವಿದ್ಯಾರ್ಥಿಗಳು ನೇರವಾಗಿ ಅವರೊಂದಿಗೆ ಮಾತನಾಡಬಹುದು. ಮಾರುಕಟ್ಟೆಯ ಬೇಡಿಕೆ ಏನೆಂದು ಸಹ ತಿಳಿದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಗಮನ ಸೆಳೆದ ಉತ್ಪನ್ನಗಳು: ಕಾಲೇಜಿನ ವಿದ್ಯಾರ್ಥಿ ಸಾಯಿ ರಚನ್ ಅವರು ಅಭಿವೃದ್ಧಿಪಡಿಸಿರುವ ಕಡಿಮೆ ನೀರನ್ನು ಬಳಸಿ ಕಾರು ತೊಳೆಯಬಹುದಾಗ ‘ವ್ಯಾಗನ್ ವಾಶ್’ ಹಾಗೂ ಕೃಷಿ ಭೂಮಿಯಲ್ಲಿರುವ ತೇವಾಂಶವನ್ನು ಸೆನ್ಸಾರ್ ಮೂಲಕ ತಿಳಿದು ಸ್ವಯಂ ಚಾಲಿತವಾಗಿ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಕೆ ಮಾಡುವ ‘ಸ್ವಯಂ ಚಾಲಿತ ನೀರಾವರಿ ಸಾಧನ’ವನ್ನು ಪ್ರದರ್ಶಿಸಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !