ಮಂಗಳವಾರ, ನವೆಂಬರ್ 19, 2019
29 °C

ಲಾಕರ್‌ ಕದ್ದೊಯ್ಯಲು ಯತ್ನಿಸಿ ಸಿಕ್ಕ!

Published:
Updated:

ಬೆಂಗಳೂರು: ಕಂಪನಿಯ ಮಾಲೀಕರ ಲಾಕರ್‍ ಕದ್ದು ಅಸ್ಸಾಂಗೆ ಪರಾರಿಯಾಗಲು ಯತ್ನಿಸಿದ ಕಳ್ಳನನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಬಂಧಿಸುವಲ್ಲಿ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಡೇಪಾಳ್ಯದ ಮುನೇಶ್ವರ ನಗರದ ಪ್ರಸಿದ್ಧ ನಿಂಜಾ ಕಾರ್ಟ್‌ ಕಂಪನಿಯ ಉದ್ಯೋಗಿ, ಅಸ್ಸಾಂನ ಕರೀಂಗಂಜ್‍ ನಿವಾಸಿ ಮುಜಾಕಿರ್ ಹುಸೇನ್ (19) ಬಂಧಿತ ಆರೋಪಿ. ಆತನಿಂದ ₹ 12 ಲಕ್ಷ ನಗದು, ಗೋದ್ರೇಜ್‌ ಕಂಪನಿ ಲಾಕರ್‌ ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂನಿಂದ ಬಂದಿದ್ದ ಮುಜಾಕಿರ್ ಹುಸೇನ್‌ಗೆ ಮಾಲೀಕರೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಕೆಲವೇ ದಿನಗಳಲ್ಲೇ ಮಾಲೀಕರ ನಂಬಿಕೆ ಗಳಿಸಿದ್ದ ಆರೋಪಿ, ಕಚೇರಿಯಲ್ಲಿ ವ್ಯಾಪಾರದ ಹಣವನ್ನು ಗೋದ್ರೇಜ್ ಲಾಕರ್‌ನಲ್ಲಿಡುವುದನ್ನು ನೋಡಿದ್ದ. ಮಾಲೀಕರು ಹೊರಗೆ ಹೋಗಿದ್ದಾಗ ಕೀ ತೆಗೆಯಲು ಗೊತ್ತಾಗದೆ, ಲಾಕರ್‌ ಅನ್ನೇ ದೋಚಿ ಪರಾರಿಯಾಗಿದ್ದ.

ಕಂಪನಿ ಮಾಲೀಕರು ಈ ಕುರಿತು ದೂರು ದಾಖಲಿಸಿದ್ದರು.

ಪ್ರತಿಕ್ರಿಯಿಸಿ (+)