ತಾಂತ್ರಿಕ ಯೋಜನೆಗಳ ಪ್ರದರ್ಶನ

ಭಾನುವಾರ, ಏಪ್ರಿಲ್ 21, 2019
32 °C

ತಾಂತ್ರಿಕ ಯೋಜನೆಗಳ ಪ್ರದರ್ಶನ

Published:
Updated:
Prajavani

ಬೆಂಗಳೂರು: ಹನುಮಂತನಗರದ ಪಿಇಎಸ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ‘ತಾಂತ್ರಿಕ ಯೋಜನೆಗಳ ಪ್ರದರ್ಶನ’ವನ್ನು ಇತ್ತೀಚೆಗೆ ಸಂಘಟಿಸಲಾಗಿತ್ತು.

‘ಹ್ಯೂಮನ್‌ ಡೈರೆಕ್ಟರ್‌ ರೋಬೊ’, ‘ಸ್ಮಾರ್ಟ್‌ ವೆಹಿಕಲ್’, ‘ಸ್ವಯಂಚಾಲಿತ ಮೋಟರೈಸ್ಡ್‌ ಜಾಕ್’, ‘ನೆಟ್‌ ಸ್ಪಾಮ್‌’ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು.

ಎನಿಟೈಮ್‌ ಮೆಡಿಸಿನ್‌ (ಎಟಿಎಂ) ಯೋಜನೆಯು ಮುಖ್ಯ ಆಕರ್ಷಣೆಯಾಗಿತ್ತು. ಈ ಯೋಜನೆ ವಿಶ್ವೇಶ್ವರಯ್ಯ ಟೆಕ್ನಿಕಲ್ ಮ್ಯೂಸಿಯಂನಲ್ಲಿ ನಡೆದ ರಾಜ್ಯಮಟ್ಟದ ಎಂಜಿನಿಯರಿಂಗ್ ಯೋಜನೆಗಳ ಪ್ರದರ್ಶನದಲ್ಲಿ ಪ್ರಶಸ್ತಿ ಗಳಿಸಿದೆ. ರಾಜ್ಯದಾದ್ಯಂತ ಆಯೋಜಿಸಿದ್ದ ವಿವಿಧ ಪ್ರದರ್ಶನಗಳಲ್ಲಿ ಬಹುಮಾನಗಳನ್ನು ‍ಪಡೆದ ಹಲವು ಯೋಜನೆಗಳೂ ಇದ್ದವು.

ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಪ್ರತಿ ಯೋಜನೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಈ ನೂತನ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಸೃಜನಾತ್ಮಕ ಮತ್ತು ನವೀನ ಪರಿಕಲ್ಪನೆಗಳನ್ನು ಸಂಶೋಧನಾ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಬೇಕು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !