ಶನಿವಾರ, ಅಕ್ಟೋಬರ್ 19, 2019
28 °C

ಇ.ಡಿ. ಮುಂದೆ ಇಂದು ರಾಜಣ್ಣ ಹಾಜರು

Published:
Updated:

ತುಮಕೂರು: ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಬುಧವಾರ (ಅ.9) ಜಾರಿ ನಿರ್ದೇಶನಾಲಯದ (ಇ.ಡಿ.) ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಇ.ಡಿ.ಯು ಸೆ.24ರಂದು ನೀಡಿದ್ದ ಸಮನ್ಸ್‌ನಲ್ಲಿ ಗುರುತಿನ ಪತ್ರದೊಂದಿಗೆ ವಿಚಾರಣೆ ಬರುವಂತೆ ಅವರಿಗೆ ಸೂಚಿ ಸಿತ್ತು. ‘ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್‌ ಕಂಪನಿಗೆ ಅಪೆಕ್ಸ್ ಬ್ಯಾಂಕ್‌ ನೇತೃತ್ವದಲ್ಲಿ ವಿವಿಧ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳು ₹ 300 ಕೋಟಿ ಸಾಲ ನೀಡಿವೆ. ಸಾಲ ಪಡೆಯಲು ಯಾವ ದಾಖಲೆ ನೀಡಿದ್ದಾರೆ. ವೈಯ ಕ್ತಿಕ ಭದ್ರತೆ ಯಾರು ಕೊಟ್ಟಿದ್ದಾರೆ ಇತ್ಯಾದಿ ಮಾಹಿತಿ ಪಡೆಯಲು ಕರೆದಿರಬಹುದು’ ಎಂದು ರಾಜಣ್ಣ ಹೇಳಿಕೆ ನೀಡಿದ್ದರು.

Post Comments (+)