ಮಂಗಳವಾರ, ಆಗಸ್ಟ್ 3, 2021
22 °C

ಲೈಂಗಿಕ ಕಿರುಕುಳ: ಆಶ್ರಮ ಮಾಲೀಕನ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಜಾಫ್ಫರ್‌ನಗರ (ಉತ್ತರಪ್ರದೇಶ): ಆಶ್ರಮದ ನಾಲ್ಕು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ  ಮತ್ತು ಮಕ್ಕಳನ್ನು ಕಾರ್ಮಿಕರಂತೆ ದುಡಿಸಿದ ಆರೋಪದಡಿ ಆಶ್ರಮದ ಮಾಲೀಕನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಶುಕೆರ್ತಲದಲ್ಲಿರುವ ಆಶ್ರಮದ ಮಾಲೀಕ ಸ್ವಾಮಿ ಭಕ್ತಿ ಭೂಷಣ್‌ ಗೋವಿಂದ್‌ ಮಹಾರಾಜ್‌ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆಶ್ರಮದಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.

ಮಕ್ಕಳ ಸಹಾಯವಾಣಿ ಮತ್ತು ಪೊಲೀಸರ ತಂಡವು ಆಶ್ರಮದಿಂದ 10 ಬಾಲಕಿಯರನ್ನು ಮಂಗಳವಾರ ರಕ್ಷಿಸಿತ್ತು.  ಈ ಮಕ್ಕಳು ತ್ರಿಪುರ, ಮಿಜೋರಾಂ ಮತ್ತು ಅಸ್ಸಾಂ ಮೂಲದವರಾಗಿದ್ದಾರೆ. 

‘ಇವರನ್ನು ಮಕ್ಕಳ ಕಲ್ಯಾಣ ಮಂಡಳಿ ಮುಂದೆ ಹಾಜರು ಪಡಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿನಾಲ್ವರ ಮೇಲೆ ಲೈಂಗಿಕ ಕಿರುಕುಳ ನೀಡಿರುವುದು ಧೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು