ಸೋಮವಾರ, ಆಗಸ್ಟ್ 8, 2022
22 °C

ತಮಿಳುನಾಡು | ತಂದೆ ಮಗನ ಕಸ್ಟಡಿ ಸಾವು ಪ್ರಕರಣ: 'ಸುಳ್ಳು ಸುದ್ದಿ ಹಂಚಿದರೆ ಕ್ರಮ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತೂತ್ತುಕುಡಿ: ಪೊಲೀಸ್‌ ಕಸ್ಟಡಿಯಲ್ಲಿ ತಂದೆ– ಮಗನ ಸಾವು ಪ್ರಕರಣ ಸಂಬಂಧಿಸಿ ಸುಳ್ಳು ಸುದ್ದಿ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸಿಐಡಿ ಆದೇಶಿಸಿದೆ.

ಜಯರಾಜ್‌ ಮತ್ತು ಬೆನಿಕ್ಸ್‌ ಅವರ ಫೋಟೋಗಳನ್ನು ತಂತ್ರಜ್ಞಾನ ಬಳಸಿ ಮಾರ್ಪಡಿಸಿ, ಪೋಸ್ಟ್‌ ಮಾಡಿದ ಆರೋಪದಡಿ ತಮಿಳು ಸುದ್ದಿ ಪೋರ್ಟಲ್‌ ವಿರುದ್ಧ ಸಮನ್ಸ್‌ ಜಾರಿ ಮಾಡಲಾಗಿದೆ ಎಂದು ಸಿಐಡಿ ಹೇಳಿದೆ.

‘ಜಯರಾಜ್‌ ಮತ್ತು ಬೆನಿಕ್ಸ್‌ ಅವರ ಎದೆ, ಕುತ್ತಿಗೆ ಮತ್ತು ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಮಿಳು ನ್ಯೂಸ್‌ ಪೋರ್ಟಲ್‌ನಲ್ಲಿ ತಪ್ಪಾಗಿ ತೋರಿಸಲಾಗಿದೆ. ಆ ಫೋಟೋಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತ ಶರೀರಕ್ಕೆ ಹೋಲಿಸಿ ಪರಿಶೀಲಿಸಿದ್ದಾರೆ. ಆದರೆ ಅಂತಹ ಗಾಯಗಳಿರಲಿಲ್ಲ’ ಎಂದು ಸಿಐಡಿ ತಿಳಿಸಿದೆ.

ಲಾಕ್‌ಡೌನ್‌ ಜಾರಿ ಇದ್ದಾಗ್ಯೂ ಅಂಗಡಿ ತೆರೆದಿದ್ದ ಕಾರಣಕ್ಕೆ ಜೂನ್‌ 19ರಂದು ಜಯರಾಜ್ ಮತ್ತು ಮಗ ಬೆನಿಕ್ಸ್‌ ಅವರನ್ನು‌ ಪೊಲೀಸರು ಬಂಧಿಸಿದ್ದರು. ಈ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕೋವಿಲಪಟ್ಟಿ ಉಪ ಕಾರಾಗೃಹದಲ್ಲಿ ಇದ್ದಾಗಲೇ ತೀವ್ರವಾಗಿ ಅಸ್ವಸ್ಥಗೊಂಡ ತಂದೆ, ಮಗ ಜೂನ್‌ 23ರಂದು  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆದರೆ ಇವರ ಸಾವು ಪೊಲೀಸರ ಚಿತ್ರಹಿಂಸೆಯಿಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು