ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ಕಾರ್ಯ; ದೋಣಿಯಲ್ಲೇ ಹೆರಿಗೆ

ಬಿಹಾರದ ಪೂರ್ವ ಚಂಪಾರಣ್‌ ಜಿಲ್ಲೆಯಲ್ಲಿ ನಡೆದ ಘಟನೆ
Last Updated 26 ಜುಲೈ 2020, 12:35 IST
ಅಕ್ಷರ ಗಾತ್ರ

ನವದೆಹಲಿ/ಪಟ್ನಾ: ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿ ಕರೆತರುತ್ತಿದ್ದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡು ದೋಣಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬಿಹಾರದ ಹಳ್ಳಿಯೊಂದರಲ್ಲಿ ನಡೆದಿದೆ.

ಪೂರ್ವ ಚಂಪಾರಣ್ ಜಿಲ್ಲೆಯ ಪ್ರವಾಹ ಪೀಡಿತ ಗೋಬ್ರಿ ಹಳ್ಳಿಯ ಮನೆಯೊಂದರಲ್ಲಿದ್ದ ಗರ್ಭಿಣಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತು. ವಿಷಯ ತಿಳಿದ ಕೂಡಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು, ಆಶಾ ಕಾರ್ಯಕತೆಯರೊಂದಿಗೆ ಸ್ಥಳಕ್ಕೆ ತೆರಳಿದರು. ಆ ಹೊತ್ತಿಗಾಗಲೇ ಹೆರಿಗೆ ನೋವಿನ ಪ್ರಮಾಣ ತೀವ್ರವಾಗಿತ್ತು. ಎನ್‌ಡಿಆರ್‌ಎಫ್‌ ಸದಸ್ಯರು, ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ದೋಣಿಯಲ್ಲೇ ಹೆರಿಗೆ ಮಾಡಿಸಿದರು.

‘ತಾಯಿ ಮತ್ತು ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಇಬ್ಬರನ್ನೂ ಆಂಬ್ಯುಲೆನ್ಸ್‌ ಮೂಲಕ ಮೋತಿಹಾರಿ ಜಿಲ್ಲೆಯ ಬಂಜಾರಿಯ ಗ್ರಾಮದ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು‘ ಎಂದು ವಿಪತ್ತು ನಿರ್ವಹಣಾ ತಂಡದ ವಕ್ತಾರರು ತಿಳಿಸಿದ್ದಾರೆ.

‘ಎನ್‌ಡಿಆರ್‌ಎಫ್‌ ತಂಡದ ಎಲ್ಲ ಸದಸ್ಯರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ತರಬೇತಿ ನೀಡಲಾಗಿರುತ್ತದೆ. ಹೀಗಾಗಿ, ಇಂಥ ತುರ್ತು ಪರಿಸ್ಥಿತಿಯಲ್ಲೂ ಹೆರಿಗೆಯಂತಹ ವೈದ್ಯಕೀಯ ಸೇವೆಗೆ ನೆರವಾಗಲು ಸಾಧ್ಯವಾಗುತ್ತದೆ‘ ಎಂದು ಅವರು ವಿವರಿಸಿದರು.

‘ಕಳೆದ 2013ರಿಂದ ಇಲ್ಲಿವರೆಗೆ ಪ್ರವಾಹಪೀಡಿತ ಪ್ರದೇಶಗಳಲ್ಲಿ ನಡೆದ ಇಂಥ ವಿಪತ್ತು ನಿರ್ವಹಣೆಯಲ್ಲಿ ಇದೇ ರೀತಿ ದೋಣಿಯ ಮೇಲೆ ಒಂಬತ್ತು ಗರ್ಭಿಣಿಯರಿಗೆ ಹೆರಿಗೆಯಾಗಿದೆ (ಅವಳಿ ಮಕ್ಕಳ ಜನನ ಸೇರಿ). ಇದು ಹತ್ತನೇ ಪ್ರಕರಣ‘ ಎಂದು ವಕ್ತಾರರು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT