ಮಂಗಳವಾರ, ಆಗಸ್ಟ್ 3, 2021
22 °C

ನಿಜ ಹೇಳುತ್ತಿರುವವರು ಯಾರು: ರಾಹುಲ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೀನಾ ಅತಿಕ್ರಮಣದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪುನಃ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ನಮ್ಮ ಭೂ ಪ್ರದೇಶದೊಳಗೆ ಚೀನೀಯರು ಬಂದಿದ್ದಾರೆ ಎಂದು ಲಡಾಖ್‌ನ ಜನರು ಹೇಳುತ್ತಿದ್ದಾರೆ, ಆದರೆ ಪ್ರಧಾನಿ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ನಿಜ ಹೇಳುತ್ತಿರುವವರು ಯಾರು’ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್‌ ಮೂಲಕ ಮೋದಿ ಅವರನ್ನು ಪ್ರಶ್ನಿಸಿರುವ ಅವರು, ಲಡಾಖ್‌ನ ಜನರು ಈ ಬಗ್ಗೆ ಮಾತನಾಡಿದ ವಿಡಿಯೊ ಹಂಚಿಕೊಂಡಿದ್ದಾರೆ.

 

ಸೇನಾಪಡೆಗಳ ಮುಖ್ಯಸ್ಥರ ಜತೆಗೆ ಪ್ರಧಾನಿ ಮೋದಿ ಅವರು ಲೇಹ್‌ನ ನಿಮು ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ರಾಹುಲ್‌ ಅವರು ಈ ಟ್ವೀಟ್‌ ಮಾಡಿದ್ದಾರೆ.

 

ಮೋದಿ ಅವರು ನಮ್ಮ ಭೂ ಪ್ರದೇಶವನ್ನು ಚೀನಾಗೆ ನೀಡಿದ್ದಾರೆ, ಚೀನಾ ಮುಂದೆ ಅವರು ಶರಣಾಗಿದ್ದಾರೆ ಎಂದು ರಾಹುಲ್‌ ಈ ಹಿಂದೆ ಆರೋಪ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು