ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ಅಪಘಾತಗಳಲ್ಲಿ 40 ಸಾವು

ಅಕ್ಬರ್‌ ಎಕ್ಸ್‌ಪ್ರೆಸ್ ರೈಲು, ರಸ್ತೆ ಅವಘಡ ಮತ್ತು ಭೂಕುಸಿತ
Last Updated 11 ಜುಲೈ 2019, 19:45 IST
ಅಕ್ಷರ ಗಾತ್ರ

ಲಾಹೋರ್‌: ಪಾಕಿಸ್ತಾನದ ವಿವಿಧೆಡೆ ಗುರುವಾರ ಸಂಭವಿಸಿದ ರೈಲು, ರಸ್ತೆ ಅಪಘಾತ ಮತ್ತು ಭೂಕುಸಿತದಿಂದಾಗಿ 40 ಜನರು ಸತ್ತಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಂಜಾಬ್‌ ಪ್ರಾಂತ್ಯದ ಸಾದಿಕಾಬಾದ್‌ ತೆಹಸಿಲ್‌ನ ರೈಲು ನಿಲ್ದಾಣದಲ್ಲಿ ಅಕ್ಬರ್‌ ಎಕ್ಸ್‌ಪ್ರೆಸ್‌ ರೈಲು ಮುಖ್ಯ ಹಳಿ ಬದಲಾಗಿ ಬೇರೊಂದು ಹಳಿಯಲ್ಲಿ ಸಂಚರಿಸಿದ ಪರಿಣಾಮ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 21 ಪ್ರಯಾಣಿಕರು ಮೃತಪಟ್ಟಿದ್ದು, 89ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಪೊಲೀಸ್ ಅಧಿಕಾರಿಯೊಬ್ಬರು (ಆರ್‌ಪಿಒ)ಮಾಹಿತಿ ನೀಡಿದ್ದಾರೆ.

‘ಮಾನವ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ’ ಎಂದಿರುವ ರೈಲ್ವೆ ಸಚಿವ ಶೇಖ್‌ ರಷೀದ್‌ ಅಹ್ಮದ್‌ ಅವರು, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ.

ಮೃತರ ಕುಟುಂಬದರಿಗೆ ₹ 15 ಲಕ್ಷ ಹಾಗೂ ಗಾಯಗೊಂಡವರಿಗೆ ₹ 5 ಲಕ್ಷ ಪರಿಹಾರವನ್ನು ರೈಲ್ವೆ ಸಚಿವರು ಘೋಷಿಸಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ಬಸ್‌ ಪಲ್ಟಿ– 13 ಸಾವು: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಬಳಿ ಪ್ರಯಾಣಿಕರ ಬಸ್ ಪಲ್ಟಿಯಾಗಿ 13 ಜನರ ಸಾವು ಸಂಭವಿಸಿದ್ದು, 34 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೂ ಕುಸಿತ– 6 ಸಾವು: ಸ್ವಾತ್‌ ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿದ್ದು ಒಂದು ಮಗು ಹಾಗೂ ಐವರು ಮಹಿಳೆಯರು ಸತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT