ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಳಕ್ಕೆ ಯತ್ನ

7
ಉತ್ತರ ಕೊರಿಯಾದಿಂದ ರಹಸ್ಯ ಕಾರ್ಯಾಚರಣೆ: ಎನ್‌ಬಿಸಿ ನ್ಯೂಸ್‌ ವರದಿ

ಅಣ್ವಸ್ತ್ರ ಸಾಮರ್ಥ್ಯ ಹೆಚ್ಚಳಕ್ಕೆ ಯತ್ನ

Published:
Updated:

ವಾಷಿಂಗ್ಟನ್ (ರಾಯಿಟರ್ಸ್): ‘ಅಣ್ವಸ್ತ್ರಗಳಿಗೆ ಅವಶ್ಯವಿರುವ ತೈಲ ಉತ್ಪಾದನೆ ಪ್ರಮಾಣವನ್ನು ಉತ್ತರ ಕೊರಿಯಾ ಹೆಚ್ಚಳ ಮಾಡಿಕೊಂಡಿದೆ. ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಿಗೆ ನಿಷೇಧ ಹೇರುವುದಕ್ಕೆ ಸಂಬಂಧಿಸಿದ ಮಾತುಕತೆ ವೇಳೆ, ಉತ್ತರ ಕೊರಿಯಾ ಈ ವಿಷಯ ಮುಚ್ಚಿಡಲು ಯತ್ನಿಸಬಹುದು’ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಹೇಳಿದ್ದಾಗಿ ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ. 

‘ಉತ್ತರ ಕೊರಿಯಾದಿಂದ ಇನ್ನು ಅಣ್ವಸ್ತ್ರ ಭೀತಿ ಇಲ್ಲ ಎಂದು ಜೂನ್ 12ರಂದು ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಆದರೆ ಗುಪ್ತಚರ ಇಲಾಖೆಯ ಈಚಿನ ಮಾಹಿತಿ ಇದಕ್ಕೆ ವ್ಯತಿರಿಕ್ತವಾಗಿದೆ’ ಎಂದು ವರದಿ ಹೇಳಿದೆ.

ಅಣ್ವಸ್ತ್ರಗಳಿಗಾಗಿ ಉತ್ತರ ಕೊರಿಯಾ ‌ಯುರೇನಿಯಂ ಉತ್ಪಾದನೆ ಹೆಚ್ಚಿಸಿದೆ ಎಂದು ಹೆಸರು ತಿಳಿಸಲು ಇಚ್ಛಿಸದ ಅಮೆರಿಕದ ಐವರು ಅಧಿಕಾರಿಗಳು ತಿಳಿಸಿದ್ದಾಗಿ ಎನ್‌ಬಿಸಿ ವರದಿ ಮಾಡಿದೆ.    

ಯಾಂಗ್‌ಬಾನ್‌ನಲ್ಲಿರುವ ತೈಲ ಉತ್ಪಾದನಾ ಕೇಂದ್ರದ ಹೊರತಾಗಿ ಹಲವು ರಹಸ್ಯ ಸ್ಥಳಗಳಲ್ಲಿ ಉತ್ತರ ಕೊರಿಯಾ ತೈಲ ಉತ್ಪಾದನೆ ನಡೆಸುತ್ತಿದೆ.

‘ನಿಲುವು ಅನಿರೀಕ್ಷಿತ’

‘ಅಣ್ವಸ್ತ್ರ ಮತ್ತು ಕ್ಷಿಪಣಿ ಪರೀಕ್ಷೆ ಕೈಬಿಡುವ ಉತ್ತರ ಕೊರಿಯಾ ನಿಲುವು ಅನಿರೀಕ್ಷಿತ. ಕ್ಷಿಪಣಿ, ಅಣ್ವಸ್ತ್ರ ಪ್ರಮಾಣ, ಅವುಗಳ ವಿವರ ಕುರಿತು ನಮ್ಮನ್ನು ವಂಚಿಸಲಾಗುತ್ತಿದೆ. ಈ ಕುರಿತು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ’ ಎಂದು ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಅಣ್ವಸ್ತ್ರ ತೈಲ ಉತ್ಪಾದನೆ ಹೆಚ್ಚಿಸಿಕೊಳ್ಳಲು ಯಾಂಗ್‌ಬಾನ್ ಹೊರತಾಗಿ ಉತ್ತರ ಕೊರಿಯಾ ಬೇರೆ ರಹಸ್ಯ ತಾಣಗಳನ್ನು ಹೊಂದಿದೆ ಎಂದು ಸಾಕಷ್ಟು ಹಿಂದೆಯೇ ಅಂದಾಜಿಸಲಾಗಿತ್ತು. ಅಣ್ವಸ್ತ್ರ ನಿಷೇದ ಪ್ರಕ್ರಿಯೆ ವೇಳೆ ಕೆಲವು ತಾಣಗಳನ್ನು ಮಾತ್ರ ಬಹಿರಂಗಪಡಿಸಿ, ಉಳಿದ ಗೋಪ್ಯ ಸ್ಥಳಗಳಲ್ಲಿ ತೈಲ ಉತ್ಪಾದನೆ ನಡೆಸುವುದು ಅವರ ಉದ್ದೇಶವಾಗಿತ್ತು. ಎನ್‌ಬಿಸಿ ವರದಿಯಿಂದ ಈ ಎರಡು ಅಂಶಗಳು ತಿಳಿಯುತ್ತಿವೆ ಎಂದು ಪೂರ್ವ ಏಷ್ಯಾ ಅಣ್ವಸ್ತ್ರ ಪ್ರಸರಣ ನಿಷೇಧ ಯೋಜನೆ ನಿರ್ದೇಶಕ ಜೆಫ್ರಿ ಲೆವಿಸ್ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !