ಗುರುವಾರ , ಜೂಲೈ 9, 2020
23 °C

ಕೋವಿಡ್‌ಗೆ ಔಷಧ | ಆರ್ಥಿಕ ನೆರವಿಗೆ 40 ದೇಶಗಳ ನಾಯಕರ ವಾಗ್ದಾನ

ಪಿಟಿಐ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ‘ಕೊರೊನಾ ಪಿಡುಗು ಎಲ್ಲ ದೇಶಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸಿದೆ. ಎಲ್ಲರೂ ಸುರಕ್ಷಿತ ಆಗುವವರೆಗೆ ಯಾರೊಬ್ಬರೂ ಸುರಕ್ಷಿತರಲ್ಲ ಎಂಬ ಸ್ಥಿತಿ ನಿರ್ಮಿಸಿದೆ‘ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌‌ ಹೇಳಿದರು.

ಕೋವಿಡ್‌–19 ರೋಗಕ್ಕೆ ಔಷಧ ಅಭಿವೃದ್ಧಿಪಡಿಸಲು 8.2 ಬಿಲಿಯನ್‌ ಡಾಲರ್‌ ನೆರವು ಒದಗಿಸುವ ವಾಗ್ದಾನವನ್ನು ವಿಶ್ವದ ನಾಯಕರು ಘೋಷಿಸಿದ ಸಂದರ್ಭದಲ್ಲಿ  ಅವರು ಈ ಮಾತು ಹೇಳಿದರು. ಕೋವಿಡ್‌ನಿಂದಾಗಿ ವಿಶ್ವದಾದ್ಯಂತ 2.5 ಲಕ್ಷ ಜನರು ಸತ್ತಿದ್ದಾರೆ.  

ಯೂರೋಪಿಯನ್‌ ಕಮಿಷನ್‌ ಆಯೋಜಿಸಿದ್ದ ಕೋವಿಡ್‌–19ಗೆ ಪ್ರತಿಕ್ರಿಯಿಸುವ ಅಂತರರಾಷ್ಟ್ರೀಯ ವಾಗ್ದಾನ ಕಾರ್ಯಕ್ರಮದಲ್ಲಿ ಸುಮಾರು 40 ದೇಶಗಳ ನಾಯಕರು ಪಾಲ್ಗೊಂಡಿದ್ದು, ನೆರವು ಒದಗಿಸುವ ಭರವಸೆ ನೀಡಿದರು.

‘ನಮ್ಮೆಲ್ಲರಿಗೂ ಸಾಮಾನ್ಯ ದೃಷ್ಟಿಕೋನ, ಗುರಿ ಇದೆ. ಎಲ್ಲೆಡೆ ಜನರನ್ನು ಒಗ್ಗೂಡಿಸೋಣ’ ಎಂದು ವಿಶ್ವಸಂಸ್ಥೆ ಮುಖ್ಯಸ್ಥರು ಹೇಳಿದರು. ಐರೋಪ್ಯ ಒಕ್ಕೂಟದ ಪರವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕ ಅಥವಾ ಚೀನಾ ಇನ್ನೂ ಈ ಕಾರ್ಯಕ್ರಮಕ್ಕೆ ಕೈಜೋಡಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು